janadhvani

Kannada Online News Paper

ಇರಾಕ್‌ನ ಭದ್ರತೆ ಮತ್ತು ಸ್ಥಿರತೆಗಾಗಿ ಸದಾ ಜೊತೆಗಿರುವುದಾಗಿ ಸೌದಿ ಅರೇಬಿಯಾ

ರಿಯಾದ್: ಇರಾಕ್‌ನ ಭದ್ರತೆ ಮತ್ತು ಸ್ಥಿರತೆಗಾಗಿ ಅದರ ಜೊತೆಗೆ ನಿಲ್ಲುವುದಾಗಿ ಸೌದಿ ಕ್ಯಾಬಿನೆಟ್ ಹೇಳಿದೆ. ರಾಜ ಸಲ್ಮಾನ್ ಅಧ್ಯಕ್ಷತೆಯಲ್ಲಿ ಯಮಾಮ ಅರಮನೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನವನ್ನು ಪುನರಾವರ್ತಿಸಲಾಯಿತು.

ಸೌದಿ ಅರೇಬಿಯಾ ತನ್ನ ಸಹೋದರ ದೇಶವಾದ ಇರಾಕ್‌ನೊಂದಿಗೆ ಉಳಿಯಲಿದೆ. ಆ ದೇಶದ ಭದ್ರತೆ ಮತ್ತು ಸ್ಥಿರತೆ ಮತ್ತು ಅರಬ್ ಪ್ರಪಂಚದೊಂದಿಗಿನ ಅದರ ಸಂಬಂಧಕ್ಕೆ ಚ್ಯುತಿ ತರುವುದನ್ನು ಸಹಿಸಲಾಗದು. ಇಂತಹ ಎಲ್ಲ ಬಿಕ್ಕಟ್ಟುಗಳನ್ನು ನಿವಾರಿಸಲು ಸೌದಿ ಅರೇಬಿಯಾ ಇರಾಕ್ ಜೊತೆ ಕೈಜೋಡಿಸಲಿದೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ರಾಜ ಸಲ್ಮಾನ್ ಹೇಳಿದರು.

ಐಎಸ್ ವಿರುದ್ಧ ಹೋರಾಡಲು ಅಂತರ್‌ರಾಷ್ಟ್ರೀಯ ಮಿತ್ರ ಪಡೆಗಳಿರುವ ಎರಡು ಇರಾಕಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಇರಾನ್ ನಡೆಸಿದ ದಾಳಿಯನ್ನು ಕ್ಯಾಬಿನೆಟ್ ಖಂಡಿಸಿದೆ. ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಗಳನ್ನು ಅನುಸರಿಸುವಂತೆ ಮಾಡಲು ಮತ್ತು ಭದ್ರತೆಯನ್ನು ದುರ್ಬಲಗೊಳಿಸುವ ಇರಾನ್‌ನ ಪ್ರಯತ್ನಗಳನ್ನು ಕೊನೆಗೊಳಿಸುವಂತೆ ಮಾಡಲು ಅಂತರ್‌ರಾಷ್ಟ್ರೀಯ ಸಮುದಾಯ ಮುಂದಾಗ ಬೇಕೆಂದು ಒತ್ತಾಯಿಸಿದೆ.

error: Content is protected !! Not allowed copy content from janadhvani.com