ಇಸ್ರೇಲ್ ಗೆ ತೆರಳುವ ಏರ್ ಇಂಡಿಯಾ ವಿಮಾನಕ್ಕೆ ಗಗನ ಹಾದಿಯನ್ನು ತೆರೆದುಕೊಟ್ಟ ಸೌದಿ ಅರೇಬಿಯಾ

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ, ಇಸ್ರೇಲ್‌ಗೆ ತೆರಳಲು ಏರ್ ಇಂಡಿಯಾ ವಿಮಾನಗಳಿಗೆ ಗಗನ ಹಾದಿಯನ್ನು ತೆರೆದು ಕೊಟ್ಟಿದೆ. ಇಸ್ರೇಲ್ ಪತ್ರಿಕೆಯಾದ ಹಾರೆಟ್ಸ್ ಈ ಬಗ್ಗೆ ವರದಿ ಮಾಡಿದೆ. ಅದೇ ಸಮಯ ಈ ಬಗ್ಗೆ ವಾಯುಯಾನ ಸಚಿವಾಲಯ ಅಥವಾ ಏರ್ ಇಂಡಿಯಾ ದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಮಾರ್ಚ್ ನಿಂದ ಟೆಲ್ ಅವೀವ್-ಹೊಸದಿಲ್ಲಿ ಮಾರ್ಗದಲ್ಲಿ ವಾರಕ್ಕೆ ಮೂರು ಹಾರಾಟವನ್ನು ನಡೆಸಲಿರುವ  ಏರ್ ಇಂಡಿಯಾ , ಡೈರೆಕ್ಟರ್ ಆಫ್‌ ಸಿವಿಲ್ ಏವಿಯೇಷನ್‌ ‌ನ ಅನುಮತಿಗಾಗಿ ಕಾಯುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ಅರಬ್ ದೇಶಗಳು ಇಸ್ರೇಲ್ ನ್ನು ಒಂದು ರಾಷ್ಟ್ರವಾಗಿ ಒಪ್ಪಿಕೊಂಡಿಲ್ಲ. ಆ ಕಾರಣಕ್ಕಾಗಿಯೇ ಯಾವುದೇ ಅರಬ್ ರಾಷ್ಟ್ರ ತನ್ನ ಗಗನ ಹಾದಿಯನ್ನು ಇಸ್ರೇಲ್‌ನ ಹಾರಾಟಕ್ಕೆ ಬಿಟ್ಟು ಕೊಟ್ಟಿಲ್ಲ. ಇದೀಗ ಸೌದಿ ಅರೇಬಿಯಾ ಅನುಮತಿ ನೀಡಿದೆ ಎನ್ನಲಾಗಿದೆ. ಹೊಸದಿಲ್ಲಿಯಿಂದ ಅಹ್ಮದಾಬಾದ್, ಒಮಾನ್, ಸೌದಿ ಅರೇಬಿಯಾ ಮುಂತಾದೆಡೆಯಿಂದಾಗಿ ಟೆಲ್ ಅವೀವ್ ತಲುಪುವುದಾದರೆ ಸಮಯ ಲಾಭ ಗಳಿಸಲು ಸಾಧ್ಯವಿದೆ. ಇದೀಗ ಹಾರಾಟ ಮಾಡುವ ಹಾದಿಯ ಬದಲಾಗಿ ಸೌದಿ ಮಾರ್ಗವನ್ನು ಅವಲಂಬಿಸಿದರೆ ಎರಡೂವರೆ ಗಂಟೆಯಲ್ಲಿ ಇಸ್ರೇಲ್ ತಲುಪಬಹುದಾಗಿದೆ,ಇದರಿಂದ ಇಂಧನ ಲಾಭ ವಾಗಲಿದ್ದು ಪ್ರಯಾಣಿಕರಿಗೆ ಟಿಕೆಟ್ ದರ ಕೂಡಾ ಕಡಿಮೆಯಾಗಲಿದೆ ಎನ್ನಲಾಗಿದೆ.

ಮುಂಬೈಯಿಂದ  ಕೆಂಪು ಸಮುದ್ರದ ಮೇಲೆ ಹಾರಾಟ ನಡೆಸುವಾಗ ಪ್ರಸ್ತುತ ಏಳು ಗಂಟೆಗಳು ಬೇಕಾಗುತ್ತದೆ.ಏರ್ ಇಂಡಿಯಾ ಇಸ್ರೇಲ್ ಹಾರಾಟ ನಡೆಸುವುದಕ್ಕಾಗಿ  750,000 ಯುರೋದ ಗ್ರಾಂಡ್ ಘೋಷಿಸಿದೆ.

One thought on “ಇಸ್ರೇಲ್ ಗೆ ತೆರಳುವ ಏರ್ ಇಂಡಿಯಾ ವಿಮಾನಕ್ಕೆ ಗಗನ ಹಾದಿಯನ್ನು ತೆರೆದುಕೊಟ್ಟ ಸೌದಿ ಅರೇಬಿಯಾ

Leave a Reply

Your email address will not be published. Required fields are marked *

error: Content is protected !!