ಫಲಸ್ತೀನ್ ಬಿಕ್ಕಟ್ಟಿಗೆ ಶೀಘ್ರ ಪರಿಹಾರ ಕಾಣಬೇಕು- ಅರಬ್ ಲೀಗ್ ಒತ್ತಾಯ

ಕೈರೋ(ಜನಧ್ವನಿ): ಅತೀ ಶೀಘ್ರದಲ್ಲೇ ಫೆಲೆಸ್ತೀನ್ ಬಿಗ್ಗಟ್ಟಿಗೆ ಪರಿಹಾರ ಕಾಣಬೇಕೆಂದು ಕೈರೋದಲ್ಲಿ ಸೇರಿದ್ದ ಅರಬ್ ಲೀಗಿನ ವಿಷೇಶ ಸಮ್ಮೇಳನ ಕೇಳಿಕೊಂಡಿದೆ. ಜೆರುಸಲೇಮನ್ನು ಇಸ್ರೇಲಿನ ರಾಜಧಾನಿ ಮಾಡುವ ಹುನ್ನಾರವು ವಿಶ್ವದಾದ್ಯಂತ ವಿಶೇಷವಾಗಿ ಪಶ್ಚಿಮ ಏಷ್ಯಾದ ಸುರಕ್ಷತೆಗೆ ಕಂಟಕವಾಗಿರುವ ವಿಷಯವಾಗಿದೆ ಎಂದು ಕುವೈತ್ ನ ಡೆಪ್ಯೂಟಿ ಪ್ರಧಾನಿ, ವಿದೇಶಾಂಗ ಸಚಿವರೂ ಆದ ಶೈಖ್ ಸಬಾ ಖಾಲಿದ್ ಅಲ್ ಹಮದ್ ಅಲ್ ಸಬಾ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾದ ನಡೆ ಒಪ್ಪುವಂತದ್ದಲ್ಲ. ಫೆಲೆಸ್ತೀನಿಯನ್ ನಿರಾಶ್ರಿತರ ಸಂಸ್ಥೆಗೆ ನೀಡಲಾಗುತ್ತಿದ್ದ ಆರ್ಥಿಕ ಸಹಾಯವನ್ನು ಕಡಿತ ಗೊಳಿಸಿರುವ ಅಮೆರಿಕಾದ ನಿಲುವು  ಅತ್ಯಂತ ಖೇದನೀಯ ಎಂದು ಸಮ್ಮೇಳನ ಅಭಿಪ್ರಾಯಿಸಿದೆ. ಫೆಲೆಸ್ತೀನಿಯನ್ ಜನತೆಯ ಹಕ್ಕುಗಳಿಗೆ ಕುವೈತ್ ನ ಬೆಂಬಳ ಮತ್ತು ಸಹಕಾರ ಸದಾ ಇರಲಿದೆ ಎಂದು ಶೈಖ್ ಸಬಾ ವ್ಯಕ್ತಪಡಿಸಿದರು. ಜೆರುಸಲೇಂನ ಯಥಾಸ್ಥಿತಿ ಕಾಪಾಡುವುದೇ ಸಧ್ಯದ ಏಕೈಕ ದಾರಿ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!