ವಾಂತಿ ಮಾಡಿದ ಪ್ರಯಾಣಿಕನಿಗೆ ಹಲ್ಲೆ ಮಾಡಿದ ‘ಓಲಾ ಟ್ಯಾಕ್ಸಿ’ ಡ್ರೈವರ್

ಬೆಂಗಳೂರು:  ವಾಂತಿ ಮಾಡಿದ ಪ್ರಯಾಣಿಕನಿಗೆ ಓಲಾ ಕಾರಿನ ಚಾಲಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.ನಗರದ ಕೋಗಿಲು ಕ್ರಾಸ್​ನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಓಲಾ ಚಾಲಕ ನಂದೀಶ್​ಎಂಬಾತ ಜಾಕ್ ರಾಡ್​ನಿಂದ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾನೆ.

ಸರ್ಜಿತ್ ಮತ್ತು ನಿತಿನ್ ಎಂಬುವರು ಹೆಬ್ಬಾಳದಿಂದ ದೇವನಹಳ್ಳಿಗೆ ಓಲಾ ಬುಕ್ ಮಾಡಿದ್ದರು. ಸರ್ಜಿತ್​ನನ್ನು ಹೆಬ್ಬಾಳದಿಂದ ಚಾಲಕ ನಂದೀಶ್ ಪಿಕ್ ಅಪ್ ಮಾಡಿದ್ದಾನೆ.ಕೊಡಿಗೇಹಳ್ಳಿ ಬಳಿ ಸರ್ಜಿತ್ ಕಾರಿನಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಚಾಲಕ ನಂದೀಶ್, ಪೆಟ್ರೋಲ್ ಬಂಕ್ ಒಂದರ ಬಳಿ ಕಾರು ನಿಲ್ಲಿಸಿ ತೊಳೆಯುವಂತೆ ಸೂಚಿಸಿದ್ದಾನೆ. ಒಪ್ಪದಿದ್ದಾಗ ಜಾಕ್ ರಾಡ್​ನಿಂದ ಮನಬಂದಂತೆ ಥಳಿಸಿದ್ದಾನೆ.

ಗಾಯಾಳು ಸರ್ಜಿತ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಯಾಣಿಕರು ಪಾನಮತ್ತರಾಗಿದ್ದರು ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!