janadhvani

Kannada Online News Paper

ಮಕ್ಕಾ ಹರಂ ಮಸೀದಿಯ ಅಭಿವೃದ್ಧಿ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣ

ಮಕ್ಕಾ: ಮಕ್ಕಾದಲ್ಲಿನ ಹರಂ ಮಸೀದಿಯ ಅಭಿವೃದ್ಧಿ ಕಾರ್ಯಗಳು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ‘ಹರಮೈನ್’ ಕಚೇರಿಯ ಮುಖ್ಯಸ್ಥರು ತಿಳಿಸಿದ್ದಾರೆ. ಮೂರನೇ ಹಂತದ ಅಭಿವೃದ್ಧಿಯ ಶೇಕಡಾ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ಹಿಜ್‌ರ ವರ್ಷದ 1444 ರಲ್ಲಿ, ವಿಶ್ವದ ಅತೀ ದೊಡ್ಡ ತೀರ್ಥಯಾತ್ರೆಯ ಕೇಂದ್ರವಾದ ಮಕ್ಕಾದ ಹರಂ ಮಸೀದಿಯಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿವೆ. ಹರಮ್ ಇತಿಹಾಸದಲ್ಲಿ ಅತಿದೊಡ್ಡ ಅಭಿವೃದ್ಧಿ ಯೋಜನೆಯಾದ ಮೂರನೇ ಹರಮ್ ಅಭಿವೃದ್ಧಿ ಯೋಜನೆ ಪೂರ್ಣಗೊಂಡಿದೆ.

ಉಳಿದಿರುವುದು ಅಂತಿಮ ಸ್ಪರ್ಶ ಮಾತ್ರ ಎಂದು ಹರಮ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಅಮ್ಮಾರ್ ಅಲ್ ಅಹ್ಮದಿ ಹೇಳಿದರು. ವಿಸ್ತರಣೆ ಪೂರ್ಣಗೊಳ್ಳುವುದರೊಂದಿಗೆ, 19 ಲಕ್ಷಕ್ಕೂ ಹೆಚ್ಚು ಭಕ್ತರು ಒಂದೇ ಸಮಯದಲ್ಲಿ ಹರಮ್‌ನಲ್ಲಿ ನಮಾಝ್ ನಿರ್ವಹಿಸಲು ಸಾಧ್ಯವಾಗಲಿದೆ.

ಅಭಿವೃದ್ಧಿ ಕಾರ್ಯಗಳಲ್ಲಿ ಕಿಂಗ್ ಅಬ್ದುಲ್ ಅಝೀಝ್ ಗೇಟ್, ಬಾಬ್ ಅಜ್ಯಾದ್, ಮೇಲಿನ ಮಹಡಿ ಮತ್ತು ಎಲೆಕ್ಟ್ರೋ ಮೆಕ್ಯಾನಿಕಲ್ ವರ್ಕ್ಸ್ ಸೇರಿವೆ. ಶೌಚಾಲಯಗಳು, ಫಯರ್ಫೆಸ್ಗಳು, ಎಸ್ಕಲೇಟರ್‌ಗಳು, ಎಲಿವೇಟರ್‌ಗಳು, ಧ್ವನಿ-ಕಣ್ಗಾವಲು ಕ್ಯಾಮೆರಾಗಳು ಮತ್ತು ತಂಪಾಗಿಸುವ ವ್ಯವಸ್ಥೆಗಳಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಈ ಯೋಜನೆಯು ಒಳಗೊಂಡಿದೆ.

error: Content is protected !! Not allowed copy content from janadhvani.com