janadhvani

Kannada Online News Paper

ಕೆ.ಸಿ.ಎಫ್ ಸೀಬ್ ಮತ್ತು ಬೌಷರ್ ಝೋನ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಮತ್ತು ಅರ್ರಿಬಾತ್-19

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಸೀಬ್ ಮತ್ತು ಬೌಷರ್ ಝೋನ್ ಗಳ ಜಂಟಿ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಅರ್ರಿಬಾತ್-19 ಇಹ್ಸಾನ್ ನ ಹೆಜ್ಜೆ ಗುರುತುಗಳು ಎಂಬ ವಿಶೇಷ ಕಾರ್ಯಕ್ರಮವು
ಇತ್ತೀಚೆಗೆ ಸೀಬ್ ವೇವ್ಸ್ ರೆಸ್ಟೋರೆಂಟ್ ಅಲ್ ಹೇಲ್ ನಲ್ಲಿ ನಡೆಯಿತು.

ತಾಜುಲ್ ಉಲಮಾ (ಖ.ಸಿ) ರವರ ಮೌಲೂದ್ ಪಾರಾಯಣ ಕಾರ್ಯಕ್ರಮಕ್ಕೆ ಝುಬೈರ್ ಸಅದಿ ಪಾಟ್ರಕೋಡಿ ನೇತೃತ್ವ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕೆ.ಸಿ.ಎಫ್ ಐ.ಎನ್.ಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಹನೀಫ್ ಸಅದಿ ಕುಡ್ತಮುಗೇರು ತಾಜುಲ್ ಉಲಮಾ (ಖ.ಸಿ) ಅನುಸ್ಮರಣಾ ಪ್ರಭಾಷಣ ನಡೆಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫ್ಯಾನ್ ಸಖಾಫಿ ಇಹ್ಸಾನ್ ನ ಹೆಜ್ಜೆ ಗುರುತುಗಳು ಮತ್ತು ಮಾದರೀ ಕಾರ್ಯಕರ್ತ ಎಂಬ ವಿಷಯದಲ್ಲಿ ಮಾತನಾಡಿದ ಅವರು ಕಾರ್ಯಕರ್ತನಲ್ಲಿರಬೇಕಾದ ಗುಣ ನಡತೆಗಳ ಬಗ್ಗೆ ವಿವರಿಸಿದರು. ಕೆ.ಸಿ.ಎಫ್ ಮತ್ತು ಎಸ್ಸೆಸ್ಸೆಫ್ ಜಂಟಿಯಾಗಿ ಇಹ್ಸಾನ್ಎಂಬ ಹೆಸರಿನಲ್ಲಿ ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ನಡೆಸುತ್ತಿರುವ ದಅವಾ ಚಟುವಟಿಕೆಗಳು ಮತ್ತು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.

ಇಕ್ಬಾಲ್ ಮದನಿ ಚೆನ್ನಾರ್ ಬುರ್ದಾ ಆಲಾಪನೆ ನಡೆಸಿದರು.
ಎಸ್.ವೈ.ಎಸ್ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು.

ಕೆ.ಸಿ.ಎಫ್ ಬೌಷರ್ ಝೋನ್ ಅಧ್ಯಕ್ಷರಾದ ಹನೀಫ್ ಮನ್ನಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಕೆ.ಸಿ.ಎಫ್ ಐ.ಎನ್.ಸಿ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ, ಪ್ರ.ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಸಂಘಟನಾ ವಿಭಾಗದ ಸಯ್ಯಿದ್ ಆಬಿದ್ ತಂಙಳ್, ಇಬ್ರಾಹಿಂ ಹಾಜಿ ಅತ್ರಾಡಿ, ಸೀಬ್ ಝೋನ್ ಅಧ್ಯಕ್ಷರಾದ ಜಸೀಮ್ ಅಹ್ಮದ್ ಕೊಪ್ಪ, ಮಾಜಿ ಅಧ್ಯಕ್ಷರಾದ ಝಕೀರ್ ಹುಸೈನ್ ಅಗರೆ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಸಿ.ಎಫ್ ಸೀಬ್ ಝೋನ್ ಪ್ರ.ಕಾರ್ಯದರ್ಶಿ ಹನೀಫ್ ಕೆ.ಸಿ ರೋಡ್ ಸ್ವಾಗತಿಸಿ, ಇಹ್ಸಾನ್ ಕನ್ವೀನರ್ ಖಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com