janadhvani

Kannada Online News Paper

ಮದೀನಾದಲ್ಲಿ ಮಜ್ಲಿಸ್ ಆದೂರು- ಸ್ನೇಹ ತೀರ ಮಜ್ಲಿಸೆ ಮಹಬ್ಬಾ ಸಮಾರೋಪ

ಮದೀನಾ : ಮಜ್ಲಿಸ್ ಶಿಫಾಅ್ ಅಸ್ಸಖಾಫತಿಲ್ ಇಸ್ಲಾಮಿಯ್ಯ ಆದೂರ್ ಮದೀನಾ ಮುನವ್ವರ ‌ಘಟಕ ವತಿಯಿಂದ ಸ್ನೇಹ ತೀರಮ್ ಮಜ್ಲಿಸೆ ಮಹಬ್ಬಾ ಶುಕ್ರವಾರ ಮದೀನಾ ಮುನವ್ವರದಲ್ಲಿ
ನಡೆಯಿತು.

ಕಾರ್ಯಕ್ರಮವನ್ನು ದಾರುಲ್ ಇರ್ಷಾದ್ ಎಜುಕೇಶನ್ ಅಕಾಡೆಮಿ ಮದೀನಾ ಮುನವ್ವರ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು ಉದ್ಘಾಟಿಸಿ, ಸಯ್ಯದ್ ಕುಟುಂಬದ ಪ್ರಾಮುಖ್ಯತೆ ವಿವರಿಸಿದರು. ಮಜ್ಲಿಸ್ ಎಜು ಪಾರ್ಕ್ ಚೇರ್ಮನ್
ಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಆದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಮಾಮ್, ರಿಯಾದ್ , ಜಿದ್ದಾದಲ್ಲಿ ಸ್ನೇಹ ತೀರ ಕ್ಯಾಂಪೇನ್ ಹಮ್ಮಿಕೊಂಡಿದ್ದು, ಈ ಕ್ಯಾಂಪೇನ್ ನ ಕೊನೆಯ ಭಾಗವಾಗಿ ಇಂದು ಮದೀನಾ ಮುನವ್ವರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ವಿಶಿಷ್ಟ ಅನುಭವ ನೀಡಿದೆ. ಸೌದಿ ಅರೇಬಿಯಾದಲ್ಲಿ ನಡೆಸಿದ ಸ್ನೇಹ ತೀರ ಮಜ್ಲಿಸೆ ಮಹಬ್ಬಾವನ್ನು ಹಬೀಬ್ ರಸೂಲ್ (ಸ.ಅ) ಅವರಿಗೆ ಅರ್ಪಿಸುತ್ತಿದ್ದೇನೆ ಎಂದರು. ದಾನ ನೀಡುವುದು ಉತ್ತಮ ಕರ್ಮಗಳಲ್ಲೊಂದಾಗಿದ್ದು, ವಿಪತ್ತುಗಳಿಂದ ರಕ್ಷೆ ಹೊಂದಲು ದಾನ ನೀಡುವಂತೆ ಕರೆ ನೀಡಿದರು. ಈ ವೇಳೆ ಮಜ್ಲಿಸ್ ಆದೂರು ಮದೀನಾ ಮುನವ್ವರ ‌ಘಟಕ ವತಿಯಿಂದ ತಂಙಳ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಮೊದಲು ಯೂಸುಫ್ ಮದನಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಆಯೋಜಿಸಲಾಗಿತ್ತು. ಈ ವೇಳೆ ಮಜ್ಲಿಸ್ ಆದೂರು ಸೌದಿ ಅರೇಬಿಯಾ ಆರ್ಗನೈಸರ್
ಮುಹಮ್ಮದ್ ಕಮಾಲ್ ರಝ್ವಿ ಅಂಜದಿ ಸುಳ್ಯ, ಅಶ್ರಫ್ ಸಖಾಫಿ ನೂಜಿ, ಹಂಝ ಉಸ್ತಾದ್, ಅಬ್ದುಲ್ ರಹ್ಮಾನ್, ನಾಸೀರ್ ಬಾಂಬಿಲ, ಸಫ್ವಾನ್ ಅಝ್ಹರಿ, ಸರ್ಫರಾಝ್ ಕುಪ್ಪೆಪದವು, ಕಮಲ್ ಬಾಂಬಿಲ , ಶಮೀಝ್ ಕುಪ್ಪೆಪದವು, ಮುನೀರ್ ಬಾಂಬಿಲ, ತಾಜುದ್ದೀನ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ :ಹಕೀಂ ಬೋಳಾರ್

error: Content is protected !! Not allowed copy content from janadhvani.com