janadhvani

Kannada Online News Paper

ಇಸ್ರೇಲ್ ಅತಿಕ್ರಮಣ: ಯುಎಸ್ ಹೇಳಿಕೆಯನ್ನು ತಿರಸ್ಕರಿಸಿದ ಸೌದಿ ಅರೇಬಿಯಾ

ರಿಯಾದ್: ವೆಸ್ಟ್ ಬ್ಯಾಂಕ್‌ನ ಇಸ್ರೇಲ್ ಅತಿಕ್ರಮಣ ಬಗ್ಗೆ ಯುಎಸ್‌ನ ಹೇಳಿಕೆಯನ್ನು ಸೌದಿ ಕ್ಯಾಬಿನೆಟ್ ತಿರಸ್ಕರಿಸಿದೆ. ರಾಜ ಸಲ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯು ಯುಎಸ್ ಹೇಳಿಕೆಯನ್ನು ತಿರಸ್ಕರಿಸಿತು. ಪರಮಾಣು ಯೋಜನೆಗೆ ಸಂಬಂಧಿಸಿ ಇರಾನ್‌ನ ನಿರಂತರ ಉಲ್ಲಂಘನೆಯನ್ನು ಕೂಡ ಸಚಿವಾಲಯ ಖಂಡಿಸಿದೆ.

ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಆಕ್ರಮಣವನ್ನು ಕಾನೂನುಬಾಹಿರ ಎಂದು ಹೇಳಲಾಗದು ಎಂಬ ಯುಎಸ್ ಹೇಳಿಕೆಯನ್ನು ಸೌದಿ ಕ್ಯಾಬಿನೆಟ್ ಸಂಪೂರ್ಣವಾಗಿ ತಿರಸ್ಕರಿಸಿದೆ. ರಿಯಾದ್‌ನ ಯಮಾಮಾ ಅರಮನೆಯಲ್ಲಿ ಸೌದಿ ದೊರೆ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇಸ್ರೇಲ್ ಬಗ್ಗೆ ಅಮೆರಿಕ ನೀಡಿರುವ ಹೇಳಿಕೆಯನ್ನು ಸಂಪೂರ್ಣ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಳು ಅಂತರ್‌ರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿವೆ. ಅರಬ್ ಶಾಂತಿ ಪ್ರಯತ್ನಗಳು ಮತ್ತು ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಫೆಲೆಸ್ತೀನಿಯನ್ ಜನರಿಗೆ ಸಂಪೂರ್ಣ ಕಾನೂನು ಹಕ್ಕನ್ನು ನೀಡಬೇಕು. ಶಾಶ್ವತ ಶಾಂತಿಗಾಗಿ ಇದು ಅವಶ್ಯಕ ಎಂದರು.

ಯುಎಸ್ ನೀತಿ ಬದಲಾವಣೆಯ ಬಗ್ಗೆ ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯುಎನ್ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

error: Content is protected !! Not allowed copy content from janadhvani.com