janadhvani

Kannada Online News Paper

ಮದೀನಾದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಯನ ಶಿಬಿರ

ಮದೀನಾ ಮುನವ್ವರ: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್(KSWA)
ಸೌದಿ ಅರೇಬಿಯಾ ರಾಷ್ಟ್ರೀಯ ಕಮಿಟಿ ವತಿಯಿಂದ ಒಂದು ದಿನದ ಅಧ್ಯಯನ ಶಿಬಿರ ಮದೀನಾ ಮುನವ್ವರದಲ್ಲಿ ನಡೆಯಿತು. ಫಾರೂಕ್ ಉಸ್ತಾದ್ ಕೊಡಗು ಶಿಬಿರವನ್ನು ಉದ್ಘಾಟಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ KSWA ರಾಷ್ಟ್ರೀಯ ಕಮಿಟಿ ಜೊತೆ ಕಾರ್ಯದರ್ಶಿ ಅಬ್ದುಲ್ ಸಮದ್ ಪೊನ್ನಂಪೇಟೆ ಅವರು ಮಾತನಾಡಿ, ಇಂದು ಸೌದಿ‌ಅರೇಬಿಯಾ ಮಾತ್ರವಲ್ದೇ ದುಬೈ, ಕತರ್, ಕುವೈಟ್‌ ಸೇರಿದಂತೆ ಜಿಸಿಸಿಯ ಎಲ್ಲೆಡೆ KSWA ವ್ಯಾಪಿಸಿದೆ ಎಂದರು.
ಕೊಡಗು ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಮಾತನಾಡಿ, ಕೊಡಗಿನ ಅನಿವಾಸಿಗಳಿಗೆ ಅಗತ್ಯವಾದ ಎಲ್ಲಾ ಸಹಾಯಕ್ಕೆ
KSWA ಸಂಘಟನೆ ಸಕ್ರೀಯವಾಗಿದೆ. 2014 ಡಿಸೆಂಬರ್ ರಿಯಾದಿನ ಮಲಾಝ್ ನಲ್ಲಿ ಕೆಲವೇ ಜನರಿಂದ ಸ್ಥಾಪಿಸಲ್ಪಟ್ಟ KSWA ಸಂಘಟನೆ ಇಂದು, ಸೌದಿ ಅರೇಬಿಯಾದ ಉದ್ದಗಲಕ್ಕೂ ವ್ಯಾಪಿಸಿದ್ದು, ಜಿಸಿಸಿಯಲ್ಲೇ
ಸೌದಿ ಅರೇಬಿಯಾ ಕಮಿಟಿ
ಹೆಚ್ಚಿನ ಸಕ್ರಿಯವಾಗಿದೆ ಎಂದರು.

ಶಾಫಿ ತಂಙಳ್ ಒಳಪಟ್ಟಣಂ ದುವಾ ನೆರವೇರಿಸಿ, ಸ್ವಲಾತ್ ನ ಮಹತ್ವ ವಿವರಿಸಿದರು.
KSWA ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಖಾಸೀಂ ಸಖಾಫಿ ಕೊಂಡಂಗೇರಿ ಅಧ್ಯಯನ ಶಿಬಿರ ನೆರವೇರಿಸಿದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ಕ್ವಿಜ್, ಕಿರಾತ್ ಪಠಣ ಹಾಗೂ ಮತ್ತಿತರ ಸ್ಫರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಕೊಡಗು ಜಿಲ್ಲಾ ಎಸ್.ಎಸ್.ಎಫ್ ಕೋಶಾಧಿಕಾರಿ ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ, KSWA ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಿದ್ದೀಕ್ ಝುಹ್ರಿ, KSWA ರಾಷ್ಟ್ರೀಯ ಸಮಿತಿ ಚೇರ್ಮನ್ ಸಯ್ಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಮುಸ್ತಫಾ ಝೈನಿ ಕಂಬಿಬಾಣೆ, ಕೊಡಗು ತಾಲೂಕು ಪಂಚಾಯತ್ ಮಾಜಿ ಸದಸ್ಯ ರಫೀಕ್ ಶುಂಠಿ ಕೊಪ್ಪ, ಅಬೂಬಕ್ಕರ್ ಸ ಅದಿ ಎಮ್ಮೆಮಾಡ್, ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು, ಯೂಸುಫ್ ಸಅದಿ ಅಯ್ಯಂಗೇರಿ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುಲ್ ರಹ್ಮಾನ್ ಕಲ್ಲಡ್ಕ ಕಿರಾತ್ ಪಠಿಸಿದರು. KSWA ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಆಬೀದ್ ಕಂಡಕರ , ಕಾರ್ಯಕ್ರಮ ನಿರೂಪಿಸಿದರು.
ಅಬ್ದುಲ್ ರಹ್ಮಾನ್ ಸ್ವಾಗತಿಸಿದರು, ಮುಸ್ತಫಾ ಕಡಂಗ ವಂದಿಸಿದರು.

ವರದಿ :ಹಕೀಂ ಬೋಳಾರ್

error: Content is protected !! Not allowed copy content from janadhvani.com