janadhvani

Kannada Online News Paper

ಜ್ಞಾನ ಸದ್ಬಳಕೆಯಾಗಲಿ: ಶಹನಾಝ್ ಫುರ್ಖಾನಿ

ಮಾಣಿ: ಮುಸ್ಲಿಂ ಮಹಿಳೆಯರು ಬರಹರಂಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡುವಂತಾಗಬೇಕು. ಕಲಿತ ಧಾರ್ಮಿಕ ಜ್ಞಾನವನ್ನು ಜೀವನದಲ್ಲಿ ಪಾಲಿಸಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಬರಹಗಾರ್ತಿ ಆಇಶಾ ಶಹನಾಝ್ ಫುರ್ಖಾನಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ದಾರುಲ್ ಇರ್ಶಾದ್ ಅಧೀನದ ಮಹಿಳಾ ಕಾಲೇಜು; ಕಬಕ KGN She Campus ನಲ್ಲಿ ನಡೆದ _’ಗ್ಲೀಮ್-2k19’_ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ವಹಿದಾ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸಿದರು. ಕೆಜಿಎನ್ ಷೀ ಕ್ಯಾಂಪಸ್ ಷರೀಅತ್ ವಿಭಾಗದ ಮುಖ್ಯಸ್ಥೆ ಶಫೀದಾ ಅಲ್ ಮಾಹಿರಾ ಹಾಗೂ ಷರೀಅತ್ ಉಪನ್ಯಾಸಕಿ ಶಫೀಖಾ ಅಲ್ ಮಾಹಿರಾ ಮುಂತಾದವರು ಮೌಲಿದ್ ಮತ್ತು ಮದ್ಹ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು.

ಇದೇ ವೇದಿಕೆಯಲ್ಲಿ
ಝೈನುಲ್ ಉಲಮಾ ರ ಪತ್ನಿ ನಫೀಸಾ ಮಾಣಿಯವರಿಗೆ ಮಹಿಳಾ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರ ವತಿಯಿಂದ ಗೌರವಾರ್ಪಣೆ ಮಾಡಲಾಯಿತು‌.

ಕುಂದಾಪುರ ಕೋಡಿ ಆಇಶಾ ಸಿದ್ದೀಖಾ ಮಹಿಳಾ ಕಾಲೇಜಿನ ಉಪನ್ಯಾಸಕಿ ಝೈನಬಾ ಮಾರ್ನಾಡ್ ಪ್ರವಾದಿ ಪ್ರೇಮದ ಕುರಿತು ಉಪನ್ಯಾಸ ನೀಡಿದರು . ಮಹಿಳಾ ಕಾಲೇಜಿನ ಪಿಯುಸಿ ಹಾಗೂ ಷರೀಅತ್ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯ್ತು.

ಅತ್ಯಧಿಕ ಬಹುಮಾನಗಳನ್ನು ಪಡೆದ ದ್ವಿತೀಯ ವರ್ಷದ ಷರೀಅತ್ ವಿದ್ಯಾರ್ಥಿನಿ ತ್ವಾಹಿರಾ ಮಾಣಿ ‘ಕ್ವೀನ್ ಆಫ್ ಗ್ಲೀಮ್-2k19’ ಪ್ರಶಸ್ತಿಗೆ ಪಾತ್ರರಾದರು. ದ್ವಿತೀಯ ಸ್ಥಾನ ಪಡೆದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ಅನೀಝಾ ಕಬಕ ‘ ‘ಸ್ಟಾರ್ ಆಫ್ ಗ್ಲೀಮ್-2k19’ ಪ್ರಶಸ್ತಿ ತನ್ನದಾಗಿಸಿಕೊಂಡರು.

ಕೆಜಿಎನ್ ಕಾಲೇಜು ಇತಿಹಾಸ ಉಪನ್ಯಾಸಕಿ ಸುಮನ್ ಶೇಖ್
ರೈಹಾನಾ ಉಪ್ಪಿನಂಗಡಿ, ಟೈಲರಿಂಗ್ ಶಿಕ್ಷಕಿ ಆಬಿದಾ ಕಬಕ ಮುಂತಾದವರು ಉಪಸ್ಥಿತರಿದ್ದರು.

ಕಬಕ ಕೆಜಿಎನ್ ಷೀ ಕ್ಯಾಂಪಸ್ ಪ್ರಾಂಶುಪಾಲೆ ದಿಲ್ಶಾನಾ ಬಾನು ಸ್ವಾಗತಿಸಿ; ವಾಣಿಜ್ಯ ವಿಭಾಗದ ಉಪನ್ಯಾಸಕಿ ಝಹೀರಾ ಸೂರಿಕುಮೇರು ಧನ್ಯವಾದಗೈದರು. ವಿದ್ಯಾರ್ಥಿನಿಯರ ಪರಿಷತ್ ಉಪಾಧ್ಯಕ್ಷೆ ತ್ವಾಹಿರಾ ಮಾಣಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com