janadhvani

Kannada Online News Paper

ಕೆಸಿಎಫ್ ಒಮಾನ್ : ಸಂಭ್ರಮ ಸಡಗರದಿಂದ ಜರುಗಿದ ಬೃಹತ್ ಮೀಲಾದ್ ಕಾನ್ಫರೆನ್ಸ್

ಗಲ್ಫ್ ರಾಷ್ಟ್ರಗಳಲ್ಲಿ ಮಿಂಚುತ್ತಿರುವ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ರಾಷ್ಟ್ರೀಯ ಸಮಿತಿಯ ವತಿಯಿಂದ ಲೋಕಾನುಗ್ರಹಿ ಹಝ್ರತ್ ಪೈಗಂಬರ್ ಮುಹಮ್ಮದ್ (ಸ.ಅ) ರವರ 1494 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಮೀಲಾದ್ ಕಾನ್ಫರೆನ್ಸ್ ಅತಿ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ರಂದು ಅಲ್ ಮಾಸಾ ಹಾಲ್ ಮಸ್ಕತ್ ನ ರುವಿಯಲ್ಲಿ “ಹಬೀಬ್ (ಸ.ಅ.) ನಮ್ಮ ಜತೆಗಿರಲಿ” ಎಂಬ ಘೋಷ ವಾಕ್ಯ ದೊಂದಿಗೆ ಬಹಳ ಯಶಸ್ವಿಯಾಗಿ
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಹುಸೈನ್ ಅಹ್ಸನಿ ಜಿಲಾನಿ ಲಕ್ಷ ದ್ವೀಪ ಇವರ ದುವಾಃ ದೊಂದಿಗೆ ಆರಂಭಗೊಂಡ ಸಮಾರಂಭದ ಉದ್ಘಾಟನೆಯನ್ನು ಮೌಲಾನ ಇಬ್ರಾಹಿಂ ಸಖಾಫಿ ಅಧ್ಯಕ್ಷರು ಎಸ್ ವೈಸ್ ದಾವಣಗೆರೆ ಇವರು ನೆರವೇರಿಸಿದರು.ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರಾದ ಹಾಫಿಝ್ ಎಚ್. ಐ. ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಇವರು ಪ್ರವಾದಿ ಮುಹಮ್ಮದ್( ಸ.ಅ) ರವರು ಈ ಜಗತ್ತಿಗೆ ಕಲಿಸಿಕೊಟ್ಟ ಶಾಂತಿಯುತ ಸಹಬಾಳ್ವೆ, ಸಮಾನತೆ, ಹಾಗೂ ಇನ್ನೂ ಹಲವಾರು ಪ್ರವಾದಿ ಮುಹಮ್ಮದ್ (ಸ.ಅ) ರವರ ಜೀವನದ ಕ್ರಮವನ್ನು ವಿವರಿಸಿದರು.

ಹಾಗೂ ಇಹ್ಸಾನ್ ಕರ್ನಾಟಕವು ಉತ್ತರ ಕರ್ನಾಟಕದಲ್ಲಿ ನಡೆಸುತ್ತಿರುವ ಇಸ್ಲಾಮಿಕ್ ದ’ಅವಾ ಕ್ರಾಂತಿ ಸೃಷ್ಟಿಸಿದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಈ ಯೋಜನೆಯ ಯಶಸ್ವಿಗೆ ಕೆಸಿಎಫ್ ನೊಂದಿಗೆ ಸಹಕರಿಸಲು ಅನಿವಾಸಿ ಕನ್ನಡಿಗರಲ್ಲಿ ಹಾಗೂ ಸಭಿಕರಲ್ಲಿ ಮನವಿ ಮಾಡಿಕೊಂಡರು.ಹಾಗೂ ಇದೇ ಸಂದರ್ಭದಲ್ಲಿ ಇವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿದ ಸನ್ಮಾನಿಸಲಾಯಿತು.

ನಂತರ ಖಾರಿ ಮುಹಮ್ಮದ್‌ ರಿಯಾಝುದ್ದೀನ್ ಅಶ್ರಫಿ ಮುಂಬಯಿ ಇವರು ನ’ಅತೇ ಶರೀಫ್ ನಡೆಸಿಕೊಟ್ಟರು. ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ, ಶಾಹಿದ್ ರಝಾ ಮಿಸ್ಬಾಹಿ, ಐಸಿಎಫ್ ಒಮಾನ್ ಅಧ್ಯಕ್ಷ ಶಫೀಕ್ ಬುಖಾರಿ,
ಇಬ್ರಾಹಿಂ ಹಾಜಿ ಅತ್ರಾಡಿ, ಜನಾಬ್ ಆರಿಫ್ ಕೋಡಿ ,ಹಂಝ ಹಾಜಿ ಕನ್ನಂಗಾರ್,ಖಾಸಿಂ ಹಾಜಿ ನಿಝ್ವ, ಶಮೀರ್ ಉಸ್ತಾದ್ ಹೂಡೆ,ಹನೀಫ್ ಸ ಅದಿ, ಝುಬೈರ್ ಸ ಅದಿ,ನಿಝಾರ್ ಝುಹುರಿ ,ಸಲೀಮ್ ಮಿಸ್ಬಾಹಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ಝೋನ್ ಅಧ್ಯಕ್ಷರುಗಳಾದ ಅಹಮದ್ ಸ್ವಾದಿಕ್ ಕಾಟಿಪಳ್ಳ, ಜಸೀಮ್,ಹನೀಫ್ ಮನ್ನಾಫ್ , ಅಬ್ಬಾಸ್ ಮರಕಡ ಸುಳ್ಯ, ಬಾಷ ತೀರ್ಥಹಳ್ಳಿ ಇವರು ಝೋನ್ ವತಿಯಿಂದ ನಡೆಸಿದ ವಿವಿಧ ಕಾರ್ಯಕ್ರಮಗಣುಗುಣವಾಗಿ ಪ್ರಶಸ್ತಿ ಪತ್ರವನ್ನು ಪಡೆದು ಕೊಂಡರು. ಕೆಸಿಎಫ್ ಒಮಾನ್ ಹೊರತಂದ ಕ್ಯಾಲೆಂಡರ್ 2020 ಇದನ್ನು ಡಿಕೆಎಸ್ಸಿ ಅಧ್ಯಕ್ಷರಾದ ಮೊನಬ್ಬ ಹಾಜಿ ಇವರಿಗೆ ಪ್ರಥಮ ಪ್ರತಿಯನ್ನು ನೀಡುವುದರ ಮೂಲಕ ಹಾಫಿಝ್ ಸುಫಿಯಾನ್ ಸಖಾಫಿ ಬಿಡುಗಡೆ ಗೊಳಿಸಿದರು.

ಕೆಸಿಎಫ್ ಒಮಾನ್ 2019 ರ ಅತ್ಯುತ್ತಮ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಅಶ್ರಫ್ ಭಾರತ್ ಸುಳ್ಯ ಇವರು ಪಡೆದು ಕೊಂಡರು.
ಸಯ್ಯಿದ್ ಸೈಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಕೊಡಗು, ಇಕ್ಬಾಲ್ ಮದನಿ ಬೆಳ್ಳಾರೆ ಮತ್ತು ಅಹಮದ್ ಸಾದಿಕ್ ಕಾಟಿಪಳ್ಳ ಇವರು ಮೌಲೂದ್ ಮಜ್ಲಿಸ್ ಹಾಗೂ ಬುರ್ಧಾ ಆಲಾಪನೆ ಯಶಸ್ವಿಯಾಗಿ ನಡೆಸಿಕೊಟ್ಟರು.

ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಇವರು ಕೆಸಿಎಫ್ ಒಮಾನ್ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿದರು. ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರು ಸ್ವಾಗತಿಸಿ ಕೆಸಿಎಫ್ ಒಮಾನ್ ಎಜುಕೇಶನ್ ಚೆಯರ್ಮೆನ್ ಉಬೈದುಲ್ಲಾ ಸಖಾಫಿ ಇವರು ವಂದಿಸಿದರು.ಕಲಂದರ್ ಬಾವ ಪರಪ್ಪು ಇವರು ಕಾರ್ಯಕ್ರಮ ನಿರೂಪಿಸಿದರು.

ಶಫೀಖ್ ಮಾರ್ನಬೈಲು ಇವರ ನೇತೃತ್ವ ಕೆಸಿಎಫ್ ಒಮಾನ್ ಐ ಟೀಮ್ ತಂಡವು ಕಾರ್ಯಕ್ರಮದ ಉಜ್ವಲ ಸಮಾಪ್ತಿಗೆ ಪ್ರಮುಖ ಪಾತ್ರವನ್ನು ವಹಿಸಿದರು.

error: Content is protected !! Not allowed copy content from janadhvani.com