janadhvani

Kannada Online News Paper

ಸುಪ್ರೀಂ ತೀರ್ಪನ್ನು ಎಲ್ಲ ಮುಸ್ಲಿಮರೂ ಗೌರವಿಸುತ್ತಾರೆ, ಮೇಲ್ಮನವಿ ಇಲ್ಲ -ಇಕ್ಬಾಲ್ ಅನ್ಸಾರಿ

ಹೊಸದೆಹಲಿ: ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬರಿ ಮಸೀದಿ ಜಮೀನಿನ ಒಡೆತನದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲ ಮುಸ್ಲಿಮರೂ ಗೌರವಿಸುತ್ತಾರೆ, ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದು ಈ ವ್ಯಾಜ್ಯದಲ್ಲಿ ಬಾಬರಿ ಮಸೀದಿ ಪರ ವಾದಿಗಳಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ತೀರ್ಪು ಪ್ರಕಟವಾಗುವ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 40 ದಿನಗಳ ಸತತ ವಿಚಾರಣೆಯ ಬಳಿಕ ಈಗ ಈ ವಿವಾದಕ್ಕೆ ಪರಿಹಾರ ದೊರೆಯುತ್ತಿರುವುದು ಸ್ವಾಗತಾರ್ಹ. ಏನೇ ತೀರ್ಪು ಬಂದರೂ ಅದನ್ನು ಒಪ್ಪುತ್ತೇವೆ. ದೇಶದ ಮುಸಲ್ಮಾನರು ಈ ನೆಲದ ಕಾನೂನನ್ನು ಗೌರವಿಸುತ್ತಾರೆ ಎಂದಿದ್ದಾರಲ್ಲದೆ, ತೀರ್ಪು ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ.

ಇದೇ ವೇಳೆ, ತೀರ್ಪು ಬಂದ ತಕ್ಷಣ ಪ್ರತಿಕ್ರಿಯಿಸಿರುವ ಅವರು, ಸಂತಸ ವ್ಯಕ್ತಪಡಿಸಿದ್ದು, ಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಹೇಳಿದ್ದಾರೆ.

70 ವರ್ಷಗಳಿಂದ ನಡೆಯುತ್ತಿರುವ ವಿವಾದಕ್ಕೆ ಈಗ ಪರಿಹಾರ ದೊರೆಯುತ್ತಿದೆ. ಇದು ತುಂಬಾ ಒಳ್ಳೆಯ ಸಂಗತಿ. ಇಡೀ ಹಿಂದೂಸ್ತಾನವೇ ಇದಕ್ಕೆ ಪರಿಹಾರವನ್ನು ನಿರೀಕ್ಷಿಸುತ್ತಿದೆ. ಈ ಕಾನೂನು ಹೋರಾಟ ಆರಂಭಿಸಿದವರಲ್ಲಿ ಕೆಲವರು ಈಗಿಲ್ಲ, ಕೆಲವರು ಮಾತ್ರ ಇದ್ದಾರೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

error: Content is protected !! Not allowed copy content from janadhvani.com