janadhvani

Kannada Online News Paper

35 ದಿನಗಳಲ್ಲಿ 14 ಅಂತ್ಯಸಂಸ್ಕಾರಕ್ಕೆ ನೆರವು : ಕೆಸಿಎಫ್ ಸಾಂತ್ವನಕ್ಕೆ ಎಲ್ಲೆಡೆ ಮೆಚ್ಚುಗೆ

ಮದೀನಾ ಮುನವ್ವರ : ಕಳೆದ 35 ದಿನಗಳಲ್ಲಿ ಉಮ್ರಾ ಯಾತ್ರಾರ್ಥಿಗಳಾಗಿ ಮದೀನಾ ಮುನವ್ವರ ಝಿಯಾರತ್ ಗೆ ಆಗಮಿಸಿದ್ದ‌ ಹಲವಾರು ಯಾತ್ರಾರ್ಥಿಗಳು ಅನಾರೋಗ್ಯದಿಂದ ಮೃತರಾಗಿದ್ದು, ಅದರಲ್ಲಿ 14 ಯಾತ್ರಿಕರ ದಫನ ಕಾರ್ಯಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಹಕರಿಸಿದೆ.

ಕಳೆದ ತಿಂಗಳು ಮೃತರಾದ ಯಾತ್ರಾರ್ಥಿಗಳ ವಿವರ

1)ಅಬ್ದುಲ್ ರಶೀದ್ ಲಕ್ನೊ(up)
30.9.20192) ಮೆಹಬೂಬ್ ಖಾನ್
(ಪುಣೆ)
03.10.20193)ಸಲೀಮ್ ಬೀ ಗುಲಾಬ್ ಖಾನ್(ನಾಗಪುರ್)
05.10.20194)ಹಾಸಿರ್ ಜಿದ್ದಾ(3 ತಿಂಗಳ ಮಗು)
07.10.20195)ಶಹ್ನಾಝ್ ಸುಲ್ತಾನ್ (ಹೈದರಾಬಾದ್)
12.10.20196)ಆಯಿಶಾ ಬೇಗಂ (ಹೈದರಾಬಾದ್)
13.10.20197)ಅಬ್ದುಲ್ ಕಾಸಿಂ
(ಮುಂಬೈ)
14.10.20198)ಮಕ್ಬಲ್ ಜಾನ್ (ಬೆಂಗಳೂರು)
19/10/20199)ಹಾಫಿ ಜಾನ್
(ಜೈಪುರ್)
22.10.201910)ಫಾತುಮ್ಮ ಬೀವಿ
(ಕೇರಳ)
25.10.201911)ಅಖಿಲ ಬಾನು ಚಿಕ್ಕಮಂಗಳೂರು
26.10.201912)ಅಮೀನಾಬಾನು (ಗುಜರಾತ್)
29/10/201913)ನೂರ್ ಜಹಾನ್ ಬೆಗಾಂ (ಬಳ್ಳಾರಿ)
31.10.201914)ಲುಕುಮಾನ್
(ಉತ್ತರ ಪ್ರದೇಶ)
02.11.2019ಹೀಗೆ ಒಂದು ತಿಂಗಳಲ್ಲಿ 14 ಜನರ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಅವಶ್ಯ ದಾಖಲೆಗಳನ್ನು ಸರಿಪಡಿಸಿ, ಭಾರತ ರಾಯಭಾರಿ ಕಚೇರಿ ಯಿಂದ ನಿರಪೇಕ್ಷಣಾ ಪತ್ರ ಪಡೆಯುವ ಹಾಗೂ ಮತ್ತಿತರ ಕಾನೂನು ಪ್ರಕ್ರಿಯೆಗಳಿಗೆ ನೆರವಾಗುತ್ತ ಅಂತಿಮ ಸಂಸ್ಕಾರದವರೆಗೆ ಕೆಸಿಎಫ್ ಕಾರ್ಯಕರ್ತರು ಮೃತರ ಸಂಬಂಧಿಕರೊಡನೆ ಕೈಜೋಡಿಸಿದ್ದಾರೆ.ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಉಮ್ರಾ ಯಾತ್ರಾರ್ಥಿಗಳು ಮದೀನಾ ಮುನವ್ವರದಲ್ಲಿ ಮರಣ ಸಂಭವಿಸಿದ ಮಾಹಿತಿ ನಮಗೆ ಸಿಕ್ಕಾಗಲೇ ನಮ್ಮ ಸಾಂತ್ವನ ಇಲಾಖೆಯ ಕಾರ್ಯಕರ್ತರು ಮಯ್ಯತ್ ಪರಿಪಾಲನೆಗೆ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ಮಾತ್ರವಲ್ಲದೆ ಮೃತರ ಕುಟುಂಬದವರನ್ನು ಸಾಂತ್ವನ ಪಡಿಸುವ ಕಾರ್ಯದಲ್ಲೂ ಕೂಡ ಸಹಕರಿಸುತ್ತಾರೆ. ಈಗಾಗಲೇ ಕೆಸಿಎಫ್ ವತಿಯಿಂದ 100ಕ್ಕೂ ಅಧಿಕ ಯಾತ್ರಾರ್ಥಿಗಳ ಜನಾಝ ಸಂಸ್ಕಾರ ಮಾಡಲಾಗಿದೆ ಎಂದು ಕೆಸಿಎಫ್ ಮದೀನಾ ಝೋನ್ ಸಾಂತ್ವನ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com