janadhvani

Kannada Online News Paper

ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್: ರಾಜ್ಯೋತ್ಸವ ಹಾಗೂ ಗಲ್ಫ್ ಇಶಾರ ಮೀಟ್

ಸೌದಿ ಅರೇಬಿಯಾ: ಕರ್ನಾಟಕದ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಖಮೀಸ್ ಮುಶೈತ್ ಸೆಕ್ಟರ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಇಶಾರ ಮೀಟ್ ಕಾರ್ಯಕ್ರಮ ನವೆಂಬರ್ 1 ರಂದು ಬೆಳಿಗ್ಗೆ ನಡೆಯಿತು.

ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಾಲೆತ್ತೂರು ಸ್ವಾಗತವನ್ನು ಕೋರಿದರು. ನಂತರ ಸೆಕ್ಟರ್ ಅಧ್ಯಕ್ಷರಾದ ಅಬ್ದಲ್ ರಝಾಕ್ ಬನ್ನೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸೆಕ್ಟರ್ ನೇತಾರರಾದ ಅಬೂಬಕರ್ ಪುರುಷರಕಟ್ಟೆ ಅವರು ಕನ್ನಡ ಕವನ ವಾಚನ ನಡೆಸಿದರು ಹಾಗೂ ಸೆಕ್ಟರ್ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅನ್ವರ್ ಕಕ್ಕೆಪದವು ಅವರು ಕರ್ನಾಟಕದ ಏಕೀಕರಣದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ಶರೀಫ್ ಉಸ್ತಾದ್ ವಿಟ್ಲ ಅವರು ಕರ್ನಾಟಕ ರಾಜ್ಯೋತ್ಸವದ ಸಂದೇಶ ಭಾಷಣ ಮಾಡಿದರು.

ಈ ವರ್ಷದ ಗಲ್ಫ್ ಇಶಾರ ಅಭಿಯಾನವನ್ನು ಸೆಕ್ಟರ್ ಅಧ್ಯಕ್ಷರು ಖಮೀಸ್ ಸೆಕ್ಟರ್ ಅಧೀನದಲ್ಲಿರುವ ತಂದಹಾ ಯುನಿಟ್ ಅಧ್ಯಕ್ಷರಾದ ಮುಹಮ್ಮದ್ ಮಂಜನಾಡಿ ಅವರಿಗೆ ಇಶಾರ ನೀಡುವ ಮೂಲಕ ಚಾಲನೆ ನೀಡಲಾಯಿತು.

ವರದಿ:ಅಬ್ದುಲ್ ರಝಾಕ್ ಸಾಲೆತ್ತೂರು
(ಕಾರ್ಯದರ್ಶಿ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ )

error: Content is protected !! Not allowed copy content from janadhvani.com