janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ‘ಅತಿಥಿ ವೀಸಾ’ ಶೀಘ್ರದಲ್ಲೇ ಚಾಲ್ತಿಗೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಅತಿಥಿ ವಿಸಾ ಸಂಪ್ರದಾಯವನ್ನು ಶೀಘ್ರದಲ್ಲೇ ಚಾಲ್ತಿಗೆ ತರಲಾಗುವುದು ಎಂದು ರಾಷ್ಟ್ರೀಯ ಹಜ್ ಉಮ್ರಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ಲಾ ಖಾದಿ ತಿಳಿಸಿದ್ದಾರೆ. ಮಖಾಂ ಪೋರ್ಟಲ್ ಮೂಲಕ ಮಧ್ಯವರ್ತಿಗಳಿಲ್ಲದೆ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಹ್ರಮ್ ಇಲ್ಲದೆ ಉಮ್ರಾ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಅತಿಥಿ ವೀಸಾ ಕಾಲಾವಧಿಯು 90 ದಿನಗಳವರೆಗೆ ಇರಲಿದ್ದು, ದೇಶದ ನಾಗರಿಕರು ಮತ್ತು ನಿವಾಸ ದಾಖಲೆ ಇರುವ ವಿದೇಶಿ ಪ್ರಜೆಗಳಿಗೂ ಅತಿಥಿಗಳನ್ನು ತಮ್ಮದೇ ಆದ ಪ್ರಾಯೋಜಕತ್ವದೊಂದಿಗೆ ಈ ಸಂಪ್ರದಾಯದ ಮೂಲಕ ಕರೆತರಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಅತಿಥಿ ವೀಸಾವನ್ನು ಯಾವ ಉದ್ಯೋಗಿಗಳ ಆಧಾರದಲ್ಲಿ ನೀಡಲಾಗುತ್ತದೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಖಾಸಗಿ ಚಾನೆಲ್‌ಗೆ ನೀಡಿದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಜ್ ಉಮ್ರಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ಲಾ ಖಾದಿ ಈ ವಿಷಯ ತಿಳಿಸಿದರು.

ಹೊಸ ನಿಯಮವು ಉಮ್ರಾ ಯಾತ್ರಾರ್ಥಿಗಳಿಗೆ ದೇಶಾದ್ಯಂತ ಪ್ರಯಾಣಿಸಲು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತದೆ. ಅಂತೆಯೇ, ಪ್ರವಾಸಿ ವೀಸಾಗಳಲ್ಲಿರುವವರಿಗೆ ಉಮ್ರಾ ನಿರ್ವಹಣೆಗೆ ಯಾವುದೇ ತಡೆ ಇಲ್ಲ. ಮಹಿಳಾ ಉಮ್ರಾ ಯಾತ್ರಿಕರಿಗೆ ಮಹ್ರಮ್ ವ್ಯವಸ್ಥೆ ಬದಲಾವಣೆ ಉಂಟಾಗಲಿದೆ.

error: Content is protected !! Not allowed copy content from janadhvani.com