janadhvani

Kannada Online News Paper

ಸೌದಿ: ಸಾರ್ವಜನಿಕ ಘನತೆಯನ್ನು ಉಲ್ಲಂಘಿಸಿದರೆ ಭಾರೀ ದಂಡ- ಪ್ರವಾಸಿಗರಿಗೆ ಎಚ್ಚರಿಕೆ

ರಿಯಾದ್: ಬಿಗಿಯಾದ ಬಟ್ಟೆ ಧರಿಸಿದರೆ ಅಥವಾ ಸಾರ್ವಜನಿಕವಾಗಿ ಚುಂಬಿಸಿದರೆ ಅವರು ವಿದೇಶೀಯರಾಗಿದ್ದರೂ, ಭಾರೀ ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ. ವಿದೇಶಿಯರಿಗೆ ಪ್ರವಾಸಿ ವೀಸಾ ನೀಡುವ ನಿರ್ಧಾರವನ್ನು ಕೈಗೊಂಡ ಮಾರನೇ ದಿನ ಸೌದಿ ಅರೇಬಿಯಾದ ಈ ಪ್ರಕಟಣೆ ಬಂದಿದೆ.

ಸಾರ್ವಜನಿಕ ಘನತೆಯನ್ನು ಉಲ್ಲಂಘಿಸಿದರೆ ಭಾರೀ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ. ದಂಡ ವಿಧಿಸಲಾಗುವ 19 ಉಲ್ಲಂಘನೆಗಳ ಬಗ್ಗೆ ಸೌದಿ ಗೃಹ ಸಚಿವಾಲಯ ಬಹಿರಂಗಪಡಿಸಿದ್ದು, ದಂಡ ಎಷ್ಟು ಎಂಬುದರ ಬಗ್ಗೆ ಸ್ಪಷ್ಟ ಪಡಿಸಲಾಗಿಲ್ಲ.

ಸೌದಿಯಲ್ಲಿ ಪುರುಷರು ಮತ್ತು ಮಹಿಳೆಯರು ಯೋಗ್ಯವಾದ ಬಟ್ಟೆಯಲ್ಲಿ ಮಾತ್ರ ಹೊರಗಡೆ ಸಂಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ಪ್ರಕಟಿಸಬೇಡಿ ಯೋಗ್ಯವಾದ ಬಟ್ಟೆಗಳನ್ನು ಧರಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಿದೇಶಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸೌದಿ ಅರೇಬಿಯಾದ ನಡವಳಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವ ಸಲುವಾಗಿ ಈ ಪ್ರಕಟನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸೌದಿ ಪ್ರವಾಸಿಗರನ್ನು ಸ್ವಾಗತಿಸಿದ್ದು, ಇದೀಗ ಪ್ರವಾಸಿ ವೀಸಾ ನೀಡಲಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ಆನ್ ಅರೈವಲ್ ವೀಸಾ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಯುರೋಪ್ ಮತ್ತು ಏಷ್ಯಾದ 49 ಅಭಿವೃದ್ಧಿ ಹೊಂದಿದ ದೇಶಗಳಿಗೆ ಇದನ್ನು ನೀಡಲಾಗುತ್ತಿದೆ.

300 ರಿಯಾಲ್ ವೀಸಾ ದರ ಮತ್ತು 140 ನೈಜ ಪ್ರಯಾಣ ವಿಮೆ ಸೇರಿದಂತೆ 440 ರಿಯಾಲ್‌ಗಳನ್ನು ಪಾವತಿಸುವ ಮೂಲಕ ಆನ್-ಅರೈವಲ್ ವೀಸಾಗಳನ್ನು ಪಡೆಯಬಹುದು. ಮುಂದಿನ ಹಂತದಲ್ಲಿ ಭಾರತಕ್ಕೆ ಈ ಸೌಲಭ್ಯ ಒದಗಿಸುವುದಾಗಿ ಸೌದಿ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ.

ವೀಸಾವನ್ನು ಆನ್‌ಲೈನ್‌ನಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾದ ಯಂತ್ರದಲ್ಲಿ ಪಡೆಯಬಹುದು. ಯಂತ್ರಗಳನ್ನು ರಿಯಾದ್, ಜಿದ್ದಾ, ದಮ್ಮಾಮ್ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.

error: Content is protected !! Not allowed copy content from janadhvani.com