janadhvani

Kannada Online News Paper

ಕುವೈತ್‌: ವಲಸಿಗರ ವೈದ್ಯಕೀಯ ಪ್ರಮಾಣಪತ್ರಗಳ ದೃಢೀಕರಣಕ್ಕೆ ಶುಲ್ಕ

ಕುವೈತ್ ನಗರ: ಕುವೈತ್‌ನಲ್ಲಿರುವ ವಲಸಿಗರ ವೈದ್ಯಕೀಯ ಪ್ರಮಾಣಪತ್ರಗಳನ್ನು ದೃಢೀಕರಿಸಲು ಶುಲ್ಕ ವಿಧಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯಕೀಯ ರಜೆ ಪ್ರಮಾಣಪತ್ರವನ್ನು ದೃಢೀಕರಿಸಲು ಎರಡು ದಿನಾರ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ದೇಶದ ಒಳಗೆ ಮತ್ತು ಹೊರಗಿನ ಖಾಸಗಿ ಆಸ್ಪತ್ರೆಗಳಿಂದ ಪಡೆಯುವ ಪ್ರಮಾಣಪತ್ರಗಳ ಅನುಮೋದನೆಗಾಗಿ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರಕ್ಕೆ 10 ದಿನಾರ್ ಮತ್ತು ಸರಕಾರಿ ಉದ್ಯೋಗಗಳಿಗಾಗಿ ನಡೆಸುವ ವೈದ್ಯಕೀಯ ಪರೀಕ್ಷೆಗಳಿಗೆ 20 ದಿನಾರ್ ಶುಲ್ಕ ವಿಧಿಸಲಾಗುತ್ತದೆ. ಅಂಗವೈಕಲ್ಯತೆಯನ್ನು ದೃಢೀಕರಿಸುವ ಪ್ರಮಾಣಪತ್ರ ಪಡೆಯಲು ಐದು ದಿನಾರ್ ಶುಲ್ಕ ಪಾವತಿಸಬೇಕಾಗಿದ್ದು, ಇದಲ್ಲದೆ, ಆರೋಗ್ಯ ಕ್ಷೇತ್ರದ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲಾಗಿದೆ.

ವೈದ್ಯಕೀಯ ಅಂಗಸಂಸ್ಥೆಗಳನ್ನು ತೆರೆಯಲು 200 ದಿನಾರ್ ಶುಲ್ಕ ನಿಗಧಿಪಡಿಸಲಾಗಿದೆ. ವೈದ್ಯಕೀಯ ಉತ್ಪನ್ನಗಳ ಜಾಹೀರಾತಿನ ಅನುಮೋದನೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ 50 ದಿನಾರ್ ಶುಲ್ಕವನ್ನು ವಿಧಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com