janadhvani

Kannada Online News Paper

ಬಹ್ರೈನ್: ವಿದೇಶೀ ಕಾರ್ಮಿಕರಿಗೆ ಆರೋಗ್ಯ ವಿಮೆ ಕಡ್ಡಾಯ

ಮನಾಮ: ಬಹ್ರೈನ್‌ನಲ್ಲಿ 2020 ರ ವೇಳೆಗೆ ವಲಸಿಗರಿಗೆ ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಲಾಗುವುದು. ವಲಸಿಗ ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ಕಾನೂನಿನಡಿ ವಿಮೆಗೆ ಸೇರಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ .

ಬಹ್ರೇನ್ 2020 ರ ವೇಳೆಗೆ ವಲಸಿಗರಿಗೆ ಕಡ್ಡಾಯ ಆರೋಗ್ಯ ವಿಮಾ ಕಾನೂನನ್ನು ಜಾರಿಗೊಳಿಸಿ, ಅದನ್ನು ಪ್ರಾಯೋಗಿಕವಾಗಿಸಲಾಗುತ್ತದೆ. ಇದು ವಿಮಾ ಪ್ರೀಮಿಯಂಗಳಲ್ಲಿ ದೊಡ್ಡ ಮಟ್ಟದ ಕ್ರಾಂತಿಗೆ ಕಾರಣವಾಗಬಹುದು ಎನ್ನಲಾಗಿದೆ. ಆರೋಗ್ಯ ವಿಮಾ ಯೋಜನೆಯು ವಿಮಾ ಕಂಪೆನಿಗಳಿಗೆ ತಮ್ಮ ಸೇವೆಗಳನ್ನು ವಿಸ್ತರಿಸಲು ಹಾದಿಯನ್ನು ತೆರೆಯಲಿದೆ.

ಬಹ್ರೈನ್‌ನ ವಿಮಾ ಕಂಪನಿಯ ಉಪಾಧ್ಯಕ್ಷ ಅಶ್ರಫ್ ಅದ್ನಾನ್ ಬಿಸೀಸು ಮಾತನಾಡಿ, ಅಧಿಕೃತ ಮಾಹಿತಿಯ ಪ್ರಕಾರ, 2016 ರ ಕೊನೆಯಲ್ಲಿ ಬಹ್ರೈನ್‌ನಲ್ಲಿ ಒಟ್ಟು ಆರೋಗ್ಯ ವಿಮಾ ಕಂತುಗಳು 60.2 ಮಿಲಿಯನ್ ಡಾಲರ್ ಆಗಿದೆ ಎಂದಿದ್ದು, ವಾರ್ಷಿಕ ಬೆಳವಣಿಗೆಯು ಶೇ. 19 ದಾಖಲಾಗಿದೆ.

error: Content is protected !! Not allowed copy content from janadhvani.com