janadhvani

Kannada Online News Paper

ಸ್ವದೇಶೀಕರಣ: ಒಮಾನ್ ಆರೋಗ್ಯ ಸಚಿವಾಲಯದಿಂದ 44 ವಲಸಿಗರ ವಜಾ

ಮಸ್ಕತ್: ಸ್ವದೇಶೀಕರಣ ಜಾರಿಯ ಭಾಗವಾಗಿ 44 ವಲಸಿಗರನ್ನು ಒಮಾನಿ ಆರೋಗ್ಯ ಸಚಿವಾಲಯದಿಂದ ವಜಾಗೊಳಿಸಲಾಗಿದೆ. ಜೆನೆಟಿಕ್ಸ್, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ ಮತ್ತು ಹೆಮಟಾಲಜಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಬದಲಿಗೆ ಸ್ಥಳೀಯ ನಾಗರಿಕರನ್ನು ನೇಮಿಸುವಂತೆ ಸೂಚಿಸಲಾಗಿದೆ.

ದೇಶಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮುಗಿಸಿ ಹೊರಬರುವ ಸ್ವದೇಶಿಗಳ ಸಂಖ್ಯೆಯು ಹೆಚ್ಚುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಉತ್ತರ ಶರ್ಕಿಯಾ, ದಕ್ಷಿಣ ಬಾಥಿನಾ, ದಾಖಿಲಿಯಾ, ಬುರೈಮಿ ಮತ್ತು ರಾಯಲ್ ಆಸ್ಪತ್ರೆಯಲ್ಲಿ ಮುಂತಾದೆಡೆ ಕಾರ್ಯ ನಿರ್ವಹಿಸುತ್ತಿದ್ದ ವಿದೇಶೀಯರನ್ನು ವಜಾಗೊಳಿಸಿ, ಸ್ಥಳೀಯ ನಿವಾಸಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ನೇಮಕಾತಿಯು ಈ ತಿಂಗಳ 25 ಮತ್ತು 26 ರಂದು ನಡೆಯಲಿದೆ.

error: Content is protected !! Not allowed copy content from janadhvani.com