janadhvani

Kannada Online News Paper

ತುಂಬೆದಡ್ಕ ದಲ್ಲಿ SSF ದ್ವಜ ದಿನ ಆಚರಣೆ

1973 ಎಪ್ರಿಲ್ 29 ಎಸ್ಸೆಸ್ಸೆಫ್ ಕೇರಳ ಮಣ್ಣಲ್ಲಿ ಜನ್ಮ ತಾಳಿದ ದಿನ ಅಂದರೆ SSF ಸ್ಥಾಪನಾ ದಿನ. ರಾಷ್ಟ್ರ ಮಟ್ಟದಲ್ಲಿ ಗೋಲ್ಡನ್ ಜುಬಿಲಿ ಆಚರಿಸುವ ಹೊಸ್ತಿಲಲ್ಲಿದೆ.1989 ಸೆಪ್ಟಂಬರ್ 19 ರಂದು ರೂಪುಗೊಂಡ SSF ಇವತ್ತು ಮಹತ್ತರವಾದ ಹತ್ತಲವಾರು ಸಾಧನೆ‌ಗಳನ್ನು ಮಾಡುವಲ್ಲಿ ಸಫಲವಾಗಿದೆ. ಈ‌ ನಿಟ್ಟಿನಲ್ಲಿ SSF ತುಂಬೆದಡ್ಕ ಶಾಖೆಯಲ್ಲಿ ನಡೆದ ದ್ವಜ‌ ದಿನಾಚರಣೆಯನ್ನು ತುಂಬೆದಡ್ಕ ಜುಮಾ ಮಸ್ಜಿದ್ ಖತೀಬರಾದಾದ ಅನ್ಸಾರ್ ಸಅದಿ ಮಾಚಾರ್ ಧ್ವಜಾರೋಹಣ ಮಾಡಿ ಪ್ರಾರ್ಥನೆಯ ಮೂಲಕ ಚಾಲನೆ ಕೊಟ್ಟರು.‌

ಈ ಕಾರ್ಯಕ್ರಮದಲ್ಲಿ ಮುಅಲ್ಲಿಂ ಶಫೀಕ್ ಹಿಮಮಿ ಇರ್ದೆ, SSF ತುಂಬೆದಡ್ಕ ಶಾಖೆಯ ಅಧ್ಯಕ್ಷ ಜ’ಅಫರ್, ಕೋಶಾಧಿಕಾರಿ ಅಶ್ರಫ್ , ಕಾರ್ಯಕರ್ತರಾದ ಸ್ವಾದಿಕ್, ಸ್ವದಖ, ಆರಿಫ್ ಹಾಗೂ ಮದರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com