janadhvani

Kannada Online News Paper

ಸೌದಿ: ಶಾಲೆಯಲ್ಲಿ ಮಗನನ್ನು ಕೊಂದ ವಿದ್ಯಾರ್ಥಿಗೆ ಕ್ಷಮಾಪಣೆ ನೀಡಿದ ತಂದೆ

ರಿಯಾದ್: ಶಾಲೆಯಲ್ಲಿ ನಡೆದ ಹೊಡೆದಾಟದಲ್ಲಿ 12 ವರ್ಷದ ಬಾಲಕನನ್ನು ಸಹಪಾಠಿ ಉಸಿರುಗಟ್ಟಿಸಿ ಕೊಂದುಹಾಕಿದ್ದಾನೆ. ರಿಯಾದ್‌ನ ಬಿಶರ್ ಬಿನ್ ಅಲ್ ವಾಲಿದ್‌ನಲ್ಲಿ ಸೋಮವಾರ ಈ ಕೊಲೆ ಘಟನೆ ನಡೆದಿದೆ. ಇಬ್ಬರು ಮಕ್ಕಳ ನಡುವಿನ ವಿವಾದ ತಾರಕಕ್ಕೇರಿ ಹೊಡೆದಾಟ ನಡೆಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇತರ ಮಕ್ಕಳು ನಂತರ ಮಧ್ಯಪ್ರವೇಶಿಸಿ ಇಬ್ಬರನ್ನೂ ಬಿಡಿಸಿರುವುದಾಗಿ ಕಂಡು ಬಂದಿದೆ.

ಶಿಕ್ಷಕರು ನೆಲದ ಮೇಲಿದ್ದ ಹುಡುಗನನ್ನು ಎತ್ತಿಕೊಂಡು ಪ್ರಥಮ ಚಿಕಿತ್ಸೆ ನೀಡಲು ಶಾಲೆಯ ಕೋಣೆಗೆ ಕರೆದೊಯ್ದರು. ರೆಡ್‌ಕ್ರೆಸೆಂಟ್‌‌ಗೆ ಕರೆ ಮಾಡಲಾದರೂ, ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ನಂತರ ಬಂದಿತ್ತು. ಆಸ್ಪತ್ರೆಗೆ ದಾಖಲಿಸಲಾದರೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದರು. ಮಗುವಿನ ಪೋಷಕರಿಗೆ ಮಾಹಿತಿ ನೀಡಲಾಗಿದ್ದರೂ, ಅವರು ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದಿಲ್ಲ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮೃತ ಮಗುವಿನ ತಂದೆ ತನ್ನ ಮಗನ ಕೊಲೆಗೆ ಕಾರಣವಾದ ವಿದ್ಯಾರ್ಥಿಯನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದು, ಈ ಬಗ್ಗೆ ಅವರು ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದರು. ವಿದ್ಯಾರ್ಥಿಯು ಆದಷ್ಟು ಬೇಗ ತನ್ನ ಹೆತ್ತವರಿಗೆ ಮತ್ತು ಶಾಲೆಗೆ ಮರಳಬೇಕೆಂದು ತಾನು ಬಯಸುತ್ತೇನೆ ಮತ್ತು ದೇವರನ್ನು ಸ್ಮರಿಸಿ ಕ್ಷಮಿಸಿರುವುದಾಗಿ ಅವರು ಹೇಳಿದರು.

ಪ್ರಿನ್ಸ್ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲ್ ಅಝೀಝ್, ಶಿಕ್ಷಣ ಸಚಿವ ಡಾ. ಹಮದ್ ಬಿನ್ ಮುಹಮ್ಮದ್ ಅಲ್-ಶೈಖ್, ರಿಯಾದ್ ವಿದ್ಯಾಬ್ಯಾಸ ಖಾತೆ ಡೈರೆಕ್ಟರ್ ಜನರಲ್ ಹಮದ್ ಅಲ್ ವಹೈಬಿ ಮುಂತಾದವರು ಮೃತ ಮಗುವಿಗೆ ಗೌರವ ಸಲ್ಲಿಸಿದರು.

error: Content is protected !! Not allowed copy content from janadhvani.com