janadhvani

Kannada Online News Paper

ಪ್ರವಾಸಿಗರ ಮೆಚ್ಚಿನ ದೇಶಗಳ ಪಟ್ಟಿಯಲ್ಲಿ ಬಹ್ರೈನ್ ಗೆ ಅಗ್ರಸ್ಥಾನ

ಮನಾಮ: ವಿನೋದ ಯಾತ್ರಿಕರಿಗೆ ಮೆಚ್ಚಿನ ದೇಶಗಳ ಪಟ್ಟಿಯಲ್ಲಿ ಬಹ್ರೈನ್ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇನ್ಟರ್‌ನೇಷನ್ ನಡೆಸಿದ ಎಕ್ಸ್‌ಪ್ಯಾಟ್ ಇನ್ಸೈಡರ್ ಸಮೀಕ್ಷೆಯಲ್ಲಿ ಬಹ್ರೈನ್ ಅಗ್ರಸ್ಥಾನ ಪಡೆದಿದೆ.

ಬಹ್ರೈನ್ ನಿರಂತರವಾಗಿ ವಲಸಿಗರು ವಿಶ್ವದ ಅತ್ಯಂತ ಒಲವು ಹೊಂದಿರುವ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2019 ರಲ್ಲಿ ಇಂಟರ್ನೇಷನ್ ನಡೆಸಿದ ಎಕ್ಸ್‌ಪ್ಯಾಟ್ ಇನ್ಸೈಡರ್ ಸಮೀಕ್ಷೆಯು ವಲಸಿಗರಿಗೆ ಹೆಚ್ಚು ಇಷ್ಟದ ತಾಣವೆಂದು ಪರಿಗಣಿಸಿದೆ. ಈ ಪಟ್ಟಿಯಲ್ಲಿ ತೈವಾನ್ ಮೊದಲ ಸ್ಥಾನದಲ್ಲಿದ್ದರೆ, ಪೋರ್ಚುಗಲ್, ವಿಯೆಟ್ನಾಂ, ಮೆಕ್ಸಿಕೊ, ಸ್ಪೇನ್ ಮತ್ತು ಸಿಂಗಾಪುರ ನಂತರದ ಸ್ಥಾನದಲ್ಲಿ ಬಹ್ರೈನ್ ಇದೆ. ಸಮೀಕ್ಷೆಯು 187 ದೇಶಗಳಲ್ಲಿ ವಾಸಿಸುವ 20,259 ವಲಸಿಗರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.

ಜೀವನ ಶ್ರೇಯಾಂಕದಲ್ಲಿ ಬಹ್ರೇನ್ 64 ರಲ್ಲಿ 26 ನೇ ಸ್ಥಾನದಲ್ಲಿದೆ. ಜೀವನದ ಗುಣಮಟ್ಟ, ಸ್ಥಳೀಯ ಜನರೊಂದಿಗೆ ಸಂವಹನ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಸ್ನೇಹಪರ ವಾತಾವರಣದ ಬಗ್ಗೆ ವಲಸಿಗರ ಅಭಿಪ್ರಾಯಗಳನ್ನು ಸಮೀಕ್ಷೆಯು ಪರಿಗಣಿಸಿದೆ..

error: Content is protected !! Not allowed copy content from janadhvani.com