janadhvani

Kannada Online News Paper

ಸೌದಿ: ವಿದೇಶೀಯರು ಕಳಿಸುವ ಹಣ ವ್ಯವಹಾರದಲ್ಲಿ ಗಮನಾರ್ಹ ಇಳಿಕೆ

ರಿಯಾದ್: ಸೌದಿಯಿಂದ ವಿದೇಶೀಯರು ರವಾನಿಸುವ ಹಣ ವ್ಯವಹಾರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ 6 ಶೇಕಡಾ ಇಳಿಕೆ ದಾಖಲಿಸಿದ್ದು, ದೇಶದಲ್ಲಿ ಜಾರಿಗೆ ತರಲಾದ ಕಾರ್ಮಿಕ ಸುಧಾರಣೆಗಳು ಹಣ ರವಾನೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ.

ಈ ವರ್ಷದ ಮೊದಲಾರ್ಧದಲ್ಲಿ, ವಿದೇಶೀಯರು ಊರಿಗೆ ಕಳುಹಿಸಿದ ಒಟ್ಟು ಮೊತ್ತವು 6,136 ಕೋಟಿ ರಿಯಾಲ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 7106 ಕೋಟಿ ರಿಯಾಲ್ ರವಾನೆಯಾಗಿತ್ತು. ಜುಲೈನಲ್ಲಿನ ರವಾನೆ ಕೂಡ ಗಮನಾರ್ಹವಾಗಿ ಕುಸಿಯಿತು. ಹಿಂದಿನ ವರ್ಷಕ್ಕಿಂತ ಆರು ಶೇಕಡಾ ಕಡಿಮೆ. ಕಳೆದ ವರ್ಷ ಇದೇ ಅವಧಿಯಲ್ಲಿ 1146 ಒಟ್ಟು ರವಾನೆಯಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರು ಶೇಕಡಾ ರವಾನೆ ಕಡಿಮೆಯಾಗಿದೆ. ಒಂದು ತಿಂಗಳಲ್ಲಿ 71 ಕೋಟಿ ರಿಯಾಲ್ ಕಡಿಮೆ ದಾಖಲಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಸತತ ಆರನೇ ಬಾರಿ ಕಡಿಮೆ ರವಾನೆ ದಾಖಲಾಗಿದೆ ಎನ್ನಲಾಗಿದೆ. ಆದರೆ ಕಳೆದ ತಿಂಗಳು ವೈಯಕ್ತಿಕ ಬಳಕೆಗಾಗಿ ಸ್ವದೇಶೀಯರು ಮನೆಗೆ ಕಳುಹಿಸಿದ ಮೊತ್ತದಲ್ಲಿ 20 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಜುಲೈನಲ್ಲಿ, ಸ್ವದೇಶೀಯರು 543 ಕೋಟಿ ರಿಯಾಲ್ ರವಾನಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ರವಾನೆ ಮಾಡಲಾದ ಮೊತ್ತವು 452 ಕೋಟಿ ರಿಯಾಲ್ ಆಗಿತ್ತು. ಸತತ ಮೂರನೇ ವರ್ಷವೂ ವಿದೇಶಿಯರ ಹಣ ರವಾನೆಯಲ್ಲಿ ಕಡಿಮೆ ದಾಖಲಾಗಿದೆ.

error: Content is protected !! Not allowed copy content from janadhvani.com