janadhvani

Kannada Online News Paper

ತ್ರಿವಳಿ ತಲಾಖ್: ಸಮಸ್ತ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದ ಸುಪ್ರೀಂ- ಕೇಂದ್ರಕ್ಕೆ ನೋಟೀಸ್

ನವದೆಹಲಿ, ಆ 23: ತ್ರಿವಳಿ ತಲಾಖ್ ಅನ್ನು ಅಪರಾಧೀಕರಣಗೊಳಿಸುವ “ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019″ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಹಿತ ಮೂವರು ಸಲ್ಲಿಸಿದ್ದ ಮನವಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿಗಳಾದ ಎನ್ ವಿ ರಮಣ ಮತ್ತು ಅಜಯ್ ರಾಸ್ತೋಗಿ ಅವರ ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ನೀಡಿದೆ.ತ್ರಿವಳಿ ತಲಾಖ್ ನಿಷೇಧ ಮಸೂದೆಯು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿದೆ, ಆದ್ದರಿಂದ ಈ ಮಸೂದೆಯನ್ನು “ಅಸಾಂವಿಧಾನಿಕ” ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ನೋಟಿಸ್ ಜಾರಿ ಮಾಡಲು ಪೀಠ ಸೂಚಿಸಿದೆ.

ಧಾರ್ಮಿಕ ಆಚರಣೆಯನ್ನು ಅನೂರ್ಜಿತವೆಂದು ಘೋಷಿಸಿದರೂ ಅದು ಇನ್ನೂ ನಡೆಯುತ್ತಿರುವುದರ ಬಗ್ಗೆ ನಮಗೆ ಅನುಮಾನವಿದೆ, ಇದು ವರದಕ್ಷಿಣೆ ತರಹದ ಅಪರಾಧವಲ್ಲವೇ?” ಸುಪ್ರೀಂಕೋರ್ಟ್ ಪ್ರಶ್ನಿಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ಸುಪ್ರೀಂ ಕೋರ್ಟ್ ಈಗಾಗಲೇ ತ್ರಿವಳಿ ತಲಾಖ್ ಅನ್ನು ಅನೂರ್ಜಿತವೆಂದು ಘೋಷಿಸಿದ್ದು, ಈ ಪ್ರಕರಣವನ್ನು ಅಪರಾಧೀಕರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

error: Content is protected !! Not allowed copy content from janadhvani.com