janadhvani

Kannada Online News Paper

ಕೃಷ್ಣಾಪುರದ ವ್ಯಕ್ತಿ ಸೌದಿಯಲ್ಲಿ ನಿಧನ- ಮರಣೋತ್ತರ ಕಾರ್ಯಕ್ಕೆ ಸಹಕರಿಸಿದ KCF

ರಿಯಾದ್: ಕಳೆದ ಆಗಸ್ಟ್ 14 ರಂದು ರಿಯಾದ್ ನಲ್ಲಿ ನಿಧನ ಹೊಂದಿದ್ದ ಕೃಷ್ಣಾಪುರದ ಇಸ್ಮಾಯೀಲ್ ಎಂಬವರ ಮರಣೋತ್ತರ ಕಾರ್ಯವು ಕೆಸಿಎಫ್ ಸಹಕಾರದೊಂದಿಗೆ ನಡೆಸಲಾಯಿತು.

ರಿಯಾದ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಸ್ಮಾಯಿಲ್ ರವರು ಕೆಲಸ ಮುಗಿಸಿ ಮರಳುವ ವೇಳೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದರು.

ಮೃತರ ಮರಣೋತ್ತರ ಕಾರ್ಯವನ್ನು ಕೈಗೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಆಸ್ಪತ್ರೆಯಿಂದ ಎಂಬಸ್ಸಿಯ ತನಕದ ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿ ಮಸ್ಜಿದುಲ್ ಜವ್ವರ ಅಲ್ ಬಬ್ರೈನ್ ನಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಮಕ್ಬರ ಶಿಮಾಲ್ ನಲ್ಲಿ ದಫನ ಮಾಡಲಾಯಿತು.

ಎಂಬಸ್ಸಿ ಕೆಲಸಕಾರ್ಯದಲ್ಲಿ ರಿಯಾದ್ ಝೋನ್ ನಾಯಕರಾದ ನಝೀರ್ ಜಿ.ಕೆ ಕಕ್ಕಿಂಜೆ, ರಮೀಝ್ ಕುಳಾಯಿ ಸಂಪೂರ್ಣವಾಗಿ ಸಹಕರಿಸಿದರೆ KCF ರಾಷ್ಟ್ರೀಯ ಮುಖಂಡರಾದ ಮಜೀದ್ ವಿಟ್ಲ ನಿರ್ದೇಶನ ನೀಡಿದರು.

ಮರಣೋತ್ತರ ಕಾರ್ಯದಲ್ಲಿ ಸಹಕರಿಸಿದ ಕೆಸಿಎಫ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ ಕುಟುಂಬಸ್ತರು ,ಅನಿವಾಸಿಯಾಗಿ ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಇನ್ನೊಬ್ಬರ ಸಹಾಯಕ್ಕೆ ಬರುವುದು ,ಅನಿವಾಸಿ ಕನ್ನಡಿಗರು ಹೆಮ್ಮೆ ಪಡುವಂತಹ ಉತ್ತಮ ಸೇವೆಯಾಗಿರುತ್ತದೆ ಎಂದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಮೃತರ ಅಂತ್ಯಕ್ರಿಯೆಯಲ್ಲಿ KCF ರಾಷ್ಟ್ರೀಯ ಸಮಿತಿಯ ಸಂಘಟನೆ ಇಲಾಖೆಯ ಕನ್ವೀನರ್ ಬಶೀರ್ ತಲಪಾಡಿ, ಝೋನ್ ಮುಖಂಡರಾದ ಹನೀಫ್ ಕಣ್ಣೂರು, ಇಸ್ಮಾಯಿಲ್ ಕನ್ನಂಗಾರು, TH ಹಬೀಬ್ ತೆಕ್ಕಾರು, ಶಮೀರ್ ಜೆಪ್ಪು ಹಾಗೂ ಮೃತರ ಪುತ್ರ ಮುಹಮ್ಮದ್ ಶಫೀಖ್ ಕ್ರಷ್ಣಾಪುರ, ಹುಸೈನ್ ಜಿದ್ದಾ, ಹಕೀಮ್ ಜಿದ್ದಾ, ಶಾಫಿ ಕಾಟಿಪಳ್ಳ,ಫೈಝಲ್ ಜಿದ್ದಾ, ಸಹಿತ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಧಾರ್ಮಿಕ ವಿಧಿವಿಧಾನಗಳಿಗೆ ನಝೀರ್ ಉಸ್ತಾಧ್ ನಂದಾರ್, PK ದಾವೂದ್ ಸಅದಿ ಉರುವಾಲು ಪದವು ನೇತೃತ್ವ ನೀಡಿದರು.

ಮೃತರು ಪತ್ನಿ ಮತ್ತು ಒಂದು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ,ಅವರ ಮಗ್ಫಿರತ್ ಮರ್ಹಮತ್ಗಾಗಿ ಎಲ್ಲರೂ ಪ್ರಾರ್ಥಿಸಲು ರಿಯಾದ್ ಝೋನ್ ವಿನಂತಿಸಿದೆ.

error: Content is protected !! Not allowed copy content from janadhvani.com