janadhvani

Kannada Online News Paper

ಹೆಚ್ಚಿನ ಮೌಲ್ಯದ ಕರೆನ್ಸಿ ಮತ್ತು ಆಭರಣಗಳಿಗೆ ಅನುಮತಿಯಿಲ್ಲ- ಸೌದಿ ಕಸ್ಟಮ್ಸ್

ರಿಯಾದ್: ದೊಡ್ಡ ಮೊತ್ತದ ಕರೆನ್ಸಿ ಅಥವಾ ಅಮೂಲ್ಯ ವಸ್ತುಗಳನ್ನು ಕೈಯಲ್ಲಿಟ್ಟುಕೊಂಡು ಸೌದಿಗೆ ಅಥವಾ ಸೌದಿ ಅರೇಬಿಯಾದಿಂದ ಹೊರಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೌದಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

60,000 ರಿಯಾಲ್‌ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕರೆನ್ಸಿಗಳು ಅಥವಾ ಆಭರಣಗಳನ್ನು ಹೊಂದುವವರಿಗೆ ಸೌದಿ ಕಸ್ಟಮ್ಸ್ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.

ಪ್ರಯಾಣಿಕರು 60,000 ರಿಯಾಲ್ ಅಥವಾ ಹೆಚ್ಚಿನ ಮೌಲ್ಯದ ನಗದು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಬಗ್ಗೆ ಘೋಷಿಸಲು ಕೋರಲಾಗಿದ್ದು, ಘೋಷಣಾ ಫಾರ್ಮ್ ಸೌದಿ ಕಸ್ಟಮ್ಸ್ ‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಇತ್ತೀಚೆಗೆ, ಮದೀನಾದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾದಿಂದ ಹೊರಗೆ ಸಾಗಿಸಲು ಯತ್ನಿಸುತ್ತಿದ್ದಾಗ 3.93 ಮಿಲಿಯನ್ ರಿಯಾಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಣವನ್ನು ಡಬ್ಬದಲ್ಲಿ, ಬ್ಯಾಗ್‌‌ಗಳಲ್ಲಿ ತುಂಬಿರುವ ವಸ್ತ್ರಗಳಲ್ಲಿ ಅಡಗಿಸಿಟ್ಟ ರೀತಿಯಲ್ಲಿ
ವಿಮಾನ ನಿಲ್ದಾಣದಿಂದ ಹೊರಗೆ ಸಾಗಿಸಲು ಯತ್ನಿಸಿದ 4 ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ.

error: Content is protected !! Not allowed copy content from janadhvani.com