janadhvani

Kannada Online News Paper

“ರಕ್ತದಾನ ಮಾಡಿ ಜೀವ ಉಳಿಸಿ” ಆಗಸ್ಟ್ 18 ಆದಿತ್ಯವಾರ ನಮ್ಮ ನಡೆ ಪುರಭವನದ ಕಡೆ

✍ಎನ್ ಕೆ ಬದ್ರುದ್ದೀನ್ ನೆಲ್ಯಾಡಿ(ಕೆ.ಸಿ.ಎಫ್. ಅಬುಧಾಬಿ)

ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿಗೆ ರಕ್ತದ ತುರ್ತು ಅವಶ್ಯಕತೆ ಇದೆ. ಅಪಘಾತ, ಅವಘಡ ಸಂಭವಿಸಿದವರು, ವಿವಿಧ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಬಳಲುತ್ತಿರುವವರು ಇವರೆಲ್ಲ ಯನಿಟ್ ರಕ್ತಕ್ಕಾಗಿ ಒದ್ದಾಡುತ್ತಿದ್ದಾರೆ.ಗೂತ್ತಿರುವ ವಿಚಾರ ಇಂತವರಿಗಾಗಿಯಾದರೂ ನಾವು ರಕ್ತದಾನವನ್ನು ಮಾಡಬೇಕಾಗಿದೆ.

ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್‌ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಹಲವಾರು ಮುಗ್ಧ ಜೀವವನ್ನು ಪಾರು ಮಾಡಬಲ್ಲದು. ಆದುದರಿಂದ ಇದೇ ಆದಿತ್ಯ ವಾರ ಮಂಗಳೂರಿನ ಪುರಭವನದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ದ ವತಿಯಿಂದ 100 ನೇ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ತಾವೆಲ್ಲರೂ ಬಂದು ರಕ್ತದಾನ ಮಾಡಿ ಮುಗ್ಧ ಜೀವಗಳನ್ನು ರಕ್ಷಣೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ.

ರಕ್ತದಾನ ಮಾಡುವವರು ತಿಳಿದಿರಬೇಕಾದ ವಿಷಯ

  • ಹೆಣ್ಣು ಗಂಡು ಎಂಬ ಭೇದವಿಲ್ಲದೆ 18ರಿಂದ 60 ವರ್ಷ ದ ಒಳಗಿರುವ ಎಲ್ಲಾ ಆರೋಗ್ಯ ವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
  • ಗಂಡಸರು 3 ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು.
  • ರಕ್ತದಾನ ಮಾಡುವ ವ್ಯಕ್ತಿಯ ತೂಕ 45 ಕೆಜಿಗಿಂತ ಹೆಚ್ಚಿರಬೇಕು.

🖋 ಎನ್ ಕೆ ಬದ್ರುದ್ದೀನ್ ನೆಲ್ಯಾಡಿ(ಕೆ.ಸಿ.ಎಫ್. ಅಬುಧಾಬಿ)

error: Content is protected !! Not allowed copy content from janadhvani.com