janadhvani

Kannada Online News Paper

ಕೆ.ಸಿ.ಎಫ್ ಬೇಶ್ ಸೆಕ್ಟ‌ರ್’ನ‌ಲ್ಲಿ ಸ್ವಾತಂತ್ರೋತ್ಸ‌ವ‌ ದಿನಾಚ‌ರ‌ಣೆ

ಜಿದ್ದಾ: ಕೆ.ಸಿ.ಎಫ್ ಜಿದ್ದಾ ಝೋನ್ ಅಧೀನ‌ದ‌ ಕೆ.ಸಿ.ಎಫ್ ಬೇಶ್ ಸೆಕ್ಟ‌ರ್, ಜಿಝಾನ್ ಘ‌ಟ‌ಕ‌ದ‌ಲ್ಲಿ ಸ್ವಾತಂತ್ರೋತ್ಸ‌ವ‌ ದಿನಾಚ‌ರ‌ಣೆಯ‌ ಪ್ರ‌ಯುಕ್ತ‌ ಸ‌ಭಾ ಕಾರ್ಯ‌ಕ್ರ‌ಮ‌ ಬ‌ಹ‌ಳ‌ ವಿಜ್ರಂಭ‌ನೆಯಿಂದ ಸೆಕ್ಟ‌ರ್‌ ಅಧ್ಯ‌ಕ್ಷ‌ರಾದ‌ ಜ‌ನಾಬ್ ಆಸಿಫ್ ಕ್ರ‌ಷ್ಣಾಪುರ‌ ಅವ‌ರ‌ ಘ‌ನ‌ ಅಧ್ಯ‌ಕ್ಷ‌ತೆಯ‌ಲ್ಲಿ ನ‌ಡೆದ‌ ಸ‌ಭೆಯ‌ನ್ನು ಸೆಕ್ಟ‌ರ್ ಪ್ರ‌ಧಾನ‌ ಕಾರ್ಯ‌ದ‌ರ್ಶಿ ಝ‌ಕ‌ರಿಯಾ ವ‌ಲ‌ವೂರು ಸ್ವಾಗ‌ತಿಸಿದ‌ರು.

ಬೇಶ್ ಸೆಕ್ಟ‌ರ್ ಕೋಶಾಧಿಕಾರಿ ಸ‌ಲೀಮ್ ಉಪ್ಪಿನಂಗ‌ಡಿಯ‌ವ‌ರು ಪ‌ರಿಶುದ್ಧ‌ ಖುರ್’ಆನ್ ಶ್ಲೋಕ‌ವ‌ನ್ನು ಪ‌ಠಿಸಿ‌ ಪ್ರಾರಂಭಿಸಿದ‌‌ ಸ‌ಭೆಯ‌ನ್ನು ಸೌದಿ ರಾಷ್ಟ್ರೀಯ‌ ಸ‌ಮಿತಿ ಶಿಕ್ಷ‌ಣ‌ ಇಲಾಖೆ ಕಾರ್ಯ‌ದ‌ರ್ಶಿ ಯ‌ಹ್ಯಾ ಕ‌ರುವೇಲು ಉದ್ಘಾಟಿಸಿ ಮಾತ‌ನಾಡುತ್ತಾ, ಸ್ವತಂತ್ರ‌ ಭಾರ‌ತ‌ದ‌‌ ಮೌಲ್ಯ‌ಗ‌ಳ‌ನ್ನು ಉಳಿಸಿ ಬೆಳೆಸ‌ಬೇಕೆಂದೂ, ಸ‌ರ್ವ‌ರಿಗೂ ಸ‌ಮಾನ‌ತೆಯ‌ನ್ನು ಬೋಧಿಸುವ‌ ಸಾಮ‌ರ‌ಸ್ಯ‌ದ‌ ಭಾರ‌ತ‌ ನ‌ಮ್ಮ‌ದಾಗ‌ಲಿ.. ಎಂದು 73ನೇ ಸ್ವಾತಂತ್ರೋತ್ಸ‌ವ‌ ದಿನಾಚ‌ರ‌ಣೆಯ‌ ಶುಭಾಶ‌ಯ‌ವ‌ನ್ನು ಕೋರಿದ‌ರು.

ತ‌ದ‌ನಂತ‌ರ ಸ್ವಾತಂತ್ರೋತ್ಸ‌ವದ‌‌ ಸಂದೇಶ ಭಾಷಣಗಾರ‌ರಾಗಿ ಆಗ‌ಮಿಸಿದ‌ ಹಿರಿಯ‌ ಸಂಪ‌ನ್ಮೂಲ‌ ವ್ಯ‌ಕ್ತಿ ಹಾಜಿ ಅಹ್ಮದ್ ಬಾವ ಮುಕ್ಕ ರ‌ವ‌ರು “ಭಾರ‌ತ‌ ದೇಶದ ಮುಸ್ಲಿಮರ ಭಾವೈಕ್ಯತೆ” ಎಂಬ‌ ವಿಷ‌ಯ‌ದ‌ ಬ‌ಗ್ಗೆ ಮಾತ‌ನಾಡುತ್ತಾ ಜಾತಿ, ಧ‌ರ್ಮ‌, ಭಾಷೆ ಹೀಗೆ ವಿವಿಧ‌ತೆಯ‌ಲ್ಲಿ ಏಕ‌ತೆಯ‌ನ್ನು ಪ್ರ‌ತಿಬಿಂಭಿಸುವ‌ ಸಂಗ‌ಮ‌ ಭೂಮಿಯಾದ‌ ಭಾರ‌ತ‌ ದೇಶ‌ದ‌ಲ್ಲಿ ಸ‌ಮಾನ‌ತೆಯ‌, ಸಾಹೋದ‌ರ್ಯ‌ತೆಯ‌, ಸೌಹಾರ್ಧ‌ತೆಯ‌ ವಾತಾವ‌ರ‌ಣ‌‌ ದಿನಕ‌ಳೆದಂತೆ ಹ‌ದ‌ಗೆಡುತ್ತಿರುವುದ‌ರಿಂದ‌ ಇದ‌ರ‌ ಸಂರ‌ಕ್ಷ‌ಣೆಗಾಗಿ ನಾವೆಲ್ಲ‌ರೂ ಸೇರಿ ಚ‌ಳುವ‌ಳಿ ನ‌ಡೆಸ‌ಬೇಕಾದ‌ ಅಗ‌ತ್ಯ‌ವಿದೆ ಎಂದು ‌ಸಂದೇಶ‌ವಿತ್ತ‌ರು.
ಉತ್ತ‌ಮ‌ ದೇಶ‌ವ‌ನ್ನು ಕ‌ಟ್ಟ‌ಬೇಕಾದ‌ ಪ್ರ‌ಜೆಗ‌ಳು, ಜ‌ನ‌ಪ್ರ‌ತಿನಿಧಿಗ‌ಳು ತ‌ಮ್ಮ‌ ರಾಜ‌ಕೀಯ‌ ಬೇಳೆ ಬೇಯಿಸ‌ಲು ದೇಶ‌ದ್ರೋಹಿ ಚ‌ಟುವ‌ಟಿಕೆಗ‌ಳ‌ಲ್ಲಿ ತೊಡ‌ಗಿಸಿ ಸ‌ಮಾಜ‌ದ‌ಲ್ಲಿ ಭ‌ಯ‌ದ‌ ವಾತಾವ‌ರ‌ಣ‌ವ‌ನ್ನು ಸೃಷ್ಟಿಸುವುದು ಕಂಡ‌ನೀಯ‌ವಾಗಿದೆ ಎಂದು ಸ್ವ‌ತಂತ್ರ‌ ಭಾರ‌ತ‌ದ‌ ಭ‌ವಿಷ್ಯ‌ದ‌ ಏಳಿಗೆಗಾಗಿ ಸಂದೇಶ‌ವಿತ್ತ‌ರು.

ಸಂದೇಶ‌ ಭಾಷ‌ಣ‌ಗಾರ‌ರಾಗಿ ಆಗ‌ಮಿಸಿದ‌ ಇನ್ನೋರ್ವ‌ ಸಂಪ‌ನ್ಮೂಲ‌ ವ್ಯ‌ಕ್ತಿ ಹಾಜಿ ಸಿ. ಎಚ್ ಅಬ್ದುಲ್ಲ ಸಖಾಫಿ ಉಸ್ತಾದ‌ರು “ನಾವು ಸ್ವತಂತ್ರರು ಆದರೂ ಅತಂತ್ರರು” ಎಂಬ‌ ವಿಷಯ‌ದ‌ಲ್ಲಿ‌ ಭಾಷ‌ನ‌ಗೈದ‌ರು.
ಸ್ವ‌ತಂತ್ರ‌ ಸಂಗ್ರಾಮ‌ದ‌ಲ್ಲಿ ಆಹೋರಾತ್ರಿ ದುಡಿದು ವೀರ‌ ಮ‌ರ‌ಣ‌ ಹೊಂದಿದ‌ ಸ್ವಾತಂತ್ರ್ಯ‌ ಹೋರಾಟ‌ಗಾರ‌ರ‌ನ್ನು ಹಾಗೂ ಇಂದಿನ‌ ಸ್ವ‌ತಂತ್ರ‌ ಭಾರ‌ತ‌ಕ್ಕಾಗಿ ಅವ‌ರು ಸ‌ಹಿಸಿದ‌ ತ್ಯಾಗೋಜ್ವ‌ಲ‌ ಜೀವ‌ನ‌ ಹಾಗೂ ಅವ‌ರ‌ಲ್ಲಿದ್ದಂತ‌ಹ ನಿಷ್ಕ‌ಲಂಕ‌ ದೇಶ‌ಪ್ರೇಮವ‌ನ್ನು‌ ಸ್ಮ‌ರಿಸುತ್ತಾ, “ದೇಶ‌ಪ್ರೇಮ‌ ಸ‌ತ್ಯ‌ವಿಶ್ವಾಸ‌ದ‌ ಭಾಗ‌ವಾಗಿದೆ” ಎಂದು ಕ‌ರೆ ನೀಡಿದ‌ರು.
ಸ್ವ‌ತಂತ್ರ‌ರಾಗಿ ಬಾಳ‌ಬೇಕಾದ‌ ಭಾರ‌ತೀಯ‌ರು ಇಂದು ಸ್ವ‌ತಂತ್ರ‌ ದೊರೆತು 73 ವ‌ರ್ಷ‌ ಕ‌ಳೆದ‌ರೂ ಇಂದು ಅತಂತ್ರ‌ರಾಗಿಯೇ ಉಳಿದಿದ್ದೇವೆ.
ಭಾರ‌ತ‌ದ‌ ಪ್ರ‌ತಿಯೊಬ್ಬ‌ ಪ್ರ‌ಜೆ ಒಗ್ಗಾಟ್ಟಾಗಿ ಸ್ವ‌ತಂತ್ರ‌ ಭಾರ‌ತ‌ವ‌ನ್ನು ರ‌ಕ್ಷ‌ಣೆಮಾಡಬೇಕಾಗಿದೆ ಎಂದು ಸಂದೇಶ‌ ಭಾಷ‌ಣ‌ದ‌ಲ್ಲಿ ತಿಳಿಸಿದ‌ರು.

ಸ‌ಭೆಯ‌ ಅಧ್ಯ‌ಕ್ಷ‌ ಪೀ‌ಠವ‌ನ್ನು ಅಲಂಕ‌ರಿಸಿದ‌ ಕೆ.ಸಿ.ಎಫ್ ಬೇಶ್ ಸೆಕ್ಟ‌ರ್‌ ಅಧ್ಯ‌ಕ್ಷ‌ರಾದ‌ ಜ‌ನಾಬ್ ಆಸಿಫ್ ಕ್ರ‌ಷ್ಣಾಪುರ‌ ರ‌ವ‌ರು ಅಧ್ಯ‌ಕ್ಷೀಯ‌ ಭಾಷ‌ಣ‌ ಗೈಯ್ಯುತ್ತಾ ಭಾರ‌ತ‌ದ‌ ಇತಿಹಾಸ‌ ಮ‌ತ್ತು ಆಧುನಿಕ‌ ಸ್ವತಂತ್ರ‌ ಭಾರ‌ತವ‌ನ್ನು ಅವ‌ಲೋಕ‌ನ‌ ನ‌ಡೆಸಿ ಮಾತ‌ನಾಡುತ್ತಾ ಭಾರ‌ತ‌ದ‌ಲ್ಲಿ ಇತ್ತೀಚೆಗೆ ಪ್ರ‌ಕೃತಿ ವಿಕೋಪದಿಂದ‌‌ ಉಂಟಾದ‌ ಪ್ರ‌ಳ‌ಯ‌ ಪೀಡಿತ‌ ಪ್ರ‌ದೇಶ‌ಗ‌ಳ ನೆರೆ ಸಂತ್ರ‌ಸ್ತ‌ರ‌ ಬಾಳಿಗೆ ನೆರವಾಗುವ‌ ಮೂಲ‌ಕ‌ ಸ‌ಮಾಜ ‌ಸೇವೆಯ‌ಲ್ಲಿ ತೊಡ‌ಗಿಸಿಕೊಂಡು ಸ‌ರ್ವ‌ದ‌ರ್ಮಿಯ‌ರ‌ಲ್ಲೂ ಸೌಹಾರ್ದ‌ತೆಯ‌ನ್ನು ಉಳಿಸಿ ಬೆಳೆಸುವ‌‌ ಮೂಲ‌ಕ ಪ್ರಬುದ್ಧ‌‌ ದೇಶ‌ವ‌ನ್ನು ಕ‌ಟ್ಟೋಣ‌ ಎಂದು ವಿನಂತಿಸುತ್ತಾ, ಸೌಹಾರ್ಧ‌ತೆಯ‌ ಪ್ರ‌ತೀಕ‌ವಾಗಿ ಸ್ವಾತಂತ್ರೋತ್ಸವ‌ ದಿನಾಚ‌ರ‌ಣೆಯ‌ ಸಂದ‌ರ್ಭ‌ದ‌ಲ್ಲಿ ನೆರೆ ಸಂತ್ರ‌ಸ್ತ‌ರಿಗೆ ಸಾಂತ್ವ‌ನ‌ದ‌ ಮಾತುಗ‌ಳ‌ ಮೂಲ‌ಕ‌ ಸಂದೇಶ‌ವಿತ್ತ‌ರು.

ತ‌ದ‌ ನಂತ‌ರ ಪ್ರ‌ಸಿದ್ಧ‌ ಗಾಯ‌ಕ‌ ಸ‌ಲೀಮ್ ಉಪ್ಪಿನಂಗ‌ಡಿಯ‌ವ‌ರು ದೇಶ‌ ಪ್ರೇಮ‌ ಗೀತೆಯ‌ನ್ನು ಮೊಳ‌ಗಿಸುತ್ತಾ ಸ‌ಭೆಯ‌ ಗ‌ಮ‌ನ‌ ಸೆಳೆದ‌ರು.
ಬೇಶ್ ಸೆಕ್ಟ‌ರ್ ಸ‌ದ‌ಸ್ಯ‌ರುಗ‌ಳಾದ‌ ಸ್ವಾಲಿಹ್ ಕ‌ನ್ನಂಗಾರ್ ಧ‌ನ್ಯ‌ವಾದ‌ ಗೈದ‌ರು ಮ‌ತ್ತು
ಅಶ್ಫಾಕ್ ಜೋಕಟ್ಟೆ ಕಾರ್ಯ‌ಕ್ರ‌ಮ ನಿರೂಪಿಸಿದ‌ರು. ಸ್ವಾತಂತ್ರೋತ್ಸವದ ಪ್ರ‌ಯುಕ್ತ‌ ಏರ್ಪ‌ಡಿಸಿದ‌‌ ಪ್ರ‌ತ್ಯೇಕ‌‌ ಸಿಹಿ ತಿಂಡಿ, ಫ‌ಲಾಹಾ‌ರ‌ಗ‌ಳ‌ನ್ನು ಸ್ವಾತಂತ್ರೋತ್ಸವ‌ದ‌ ಸಂತೋಷ‌ ಸೂಚ‌ಕ‌ವಾಗಿ ವಿತ‌ರಿಸ‌ಲಾಯಿತು.

error: Content is protected !! Not allowed copy content from janadhvani.com