janadhvani

Kannada Online News Paper

‘ಬ್ಲಡ್ ಸೈಬೋ SSF ದ.ಕ’ 100 ನೇ ಕ್ಯಾಂಪ್- ಆಗಸ್ಟ್ 18 ಕ್ಕೆ ಮಂಗಳೂರಿನಲ್ಲಿ

ಜಹಫರ್ ಸಾಧಿಕ್ ಕಟ್ಟದಪಡ್ಪು

ಸುನ್ನೀ ಉಲಮಾಗಳ ನಿರ್ದೇಶನದಂತೆ ಧಾರ್ಮಿಕವಾಗಿ ಭಾರತದಾದ್ಯಂತ ಕಾರ್ಯಚರಿಸುತ್ತಿರುವ ಸಂಘಟನೆಯಾಗಿದೆ “SSF”. ದಾರಿ ತಪ್ಪುತ್ತಿರುವ ಮುಸ್ಲಿಂ ಯುವ ಸಮೂಹವನ್ನು ಸರಿ ದಾರಿಗೆ ತಂದು ಇಸ್ಲಾಮಿನ ಆಶಯ ಆದರ್ಶಗಳನ್ನು ಜೀವನದಲ್ಲಿ ಪಾಲಿಸುವಂತೆ ಮಾರ್ಗದರ್ಶನ ನೀಡುತ್ತಾ ಪರಲೋಕ ಜೀವನದ ರಕ್ಷೆ ಹೊಂದಲು ಸಹಾಯ ಮಾಡುವ ಧಾರ್ಮಿಕ ಸಂಘಟನೆಯೇ SSF ಸಂಘಟನೆ, ಈ ಸಂಘಟನೆಯ ನೇತೃತ್ವವು ತಮಗೆಲ್ಲ ತಿಳಿದಂತೆ ನಮ್ಮ ಭಾರತ ದೇಶದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಎಂಬುವುದು ಸಂಘಟನೆಯ ಪ್ಲಸ್ ಪಾಯಿಂಟ್ ಆಗಿರುತ್ತದೆ, ಅದಲ್ಲದೇ ಇನ್ನಿತರ ಹಲವು ಸಾದಾತುಗಳ ನೇತೃತ್ವದಲ್ಲಿ ನಮ್ಮ ಕರ್ನಾಟಕ ರಾಜ್ಯದ ದ.ಕನ್ನಡ ಜಿಲ್ಲೆಯಲ್ಲಿ SSF ಸಂಘಟನೆಯು ಹೊಸ ಕ್ರಾಂತಿಯನ್ನೆ ಸೃಷ್ಟಿಸಿದ್ದು ನಿಮಗೆಲ್ಲ ತಿಳಿದ ವಿಷಯ, ಅದರ ಬಗ್ಗೆ ಸವಿಸ್ತಾರವಾಗಿ ವಿವರಿಸಬೇಕಾಗಿಲ್ಲ.

ಇಸ್ಲಾಮಿನಲ್ಲಿ ಒಬ್ಬ ವ್ಯಕ್ತಿಗೆ ತನ್ನ ದೇಹದ ಯಾವುದಾದರು ಒಂದು ಅಂಶವನ್ನು ದಾನ ಮಾಡಲು ಆದೇಶಿಸಿದ್ದರೆ ಅದು ರಕ್ತ ಮಾತ್ರ. “ರಕ್ತದಾನ ಶ್ರೇಷ್ಠ ದಾನವಾಗಿದೆ” ಎಂಬ ಆಶಯವನ್ನು ತನ್ನ ಗುರಿಯಾಗಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ SSF ಸಂಘಟನೆಯು ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ ಎಂಬ ಧ್ಯೇಯ ವಾಕ್ಯದೊಂದಿಗೆ SSF Blood Saibo D.K district ಎಂಬ ವಿಶೇಷ ತಂಡವನ್ನು ರಚಿಸಿ, ಶಿಬಿರಗಳನ್ನು ಏರ್ಪಡಿಸಿ, ದಾನಿಗಳ ರಕ್ತವನ್ನು ಶೇಖರಣೆ ಮಾಡಿ ರೋಗಿಗಳಿಗೆ ನೀಡುವ ಉತ್ತಮ ಕಾರ್ಯವನ್ನು ನಡೆಸುತ್ತಿದೆ.

2017 ರ ಜುಲೈ 14 ರಂದು ಅಧಿಕೃತವಾಗಿ ಆರಂಭಿಸಿದ ಈ ಮಹತ್ತರ ಯೋಜನೆಯು ತನ್ನ 100ನೆಯ ರಕ್ತದಾನ ಶಿಬಿರವನ್ನು ಮಂಗಳೂರಿನ 5 ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಆಗಸ್ಟ್ 18 ರಂದು ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಿದೆ. ತನ್ನ ಎರಡು ವರ್ಷಗಳ ಸೇವೆಯಲ್ಲಿ 7000ಕ್ಕಿಂತಲೂ ಅಧಿಕ ರೋಗಿಗಳ ಪ್ರಾಣವನ್ನು ಉಳಿಸುವಲ್ಲಿ ಸಫಲಗೊಂಡಿದೆ. ತನ್ನ ಸೇವೆಯನ್ನು ಕೇವಲ ದಕ್ಷಿಣ ಕನ್ನಡದ ರೋಗಿಗಳಿಗೆ ಮಾತ್ರ ಸೀಮಿತವಾಗಿರಿಸದೆ ಕಾಸರಗೋಡು, ಕೊಡಗು, ಉಡುಪಿಯ ಆಸ್ಪತ್ರೆಯ ರೋಗಿಗಳಿಗೂ ನೀಡಿದೆ.

ಒಂದು ದಿನದಲ್ಲಿ 6 ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 689 ಯುನಿಟ್ ರಕ್ತವನ್ನು ಸಂಗ್ರಹಿಸಿ, ಕೇವಲ 2 ವರ್ಷಗಳಲ್ಲಿ 100 ನೆಯ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಸಾಧನೆಗೈದು SSF ಸಂಘಟನೆಯು ಜನರ ಹೆಗ್ಗಳಿಕೆಗೆ ಪಾತ್ರವಾಗಿದೆ. SSF ಸಂಘಟನೆಯನ್ನು ತಳ್ಳಿ ಹಾಕಲು ವಿರೋಧಿಗಳು ಹಲವಾರು ಪ್ರಯತ್ನಗಳು ನಡೆಸಿದರೂ, ಅದ್ಯಾವುದನ್ನೂ ಲೆಕ್ಕಿಸದೆ SSF ಯಶಸ್ಸಿನತ್ತ ಮುನ್ನುಗ್ಗುತ್ತಿದೆ.

ಆದ್ದರಿಂದ ಯುವ ಸಮೂಹವೇ ಕೈಜೋಡಿಸಿ SSF ಎಂಬ ಮಹತ್ತರವಾದ ಸಂಘಟನೆಯೊಂದಿಗೆ, ದ.ಕನ್ನಡ ಜಿಲ್ಲಾ SSF ಸಂಘಟನೆ ಅಗಸ್ಟ್ 18 ರಂದು ಮಂಗಳೂರಿನಲ್ಲಿ ಆಯೋಜಿಸುವ 100 ನೇ ರಕ್ತದಾನ ಮಹಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನಲ್ಲಿರುವ ರಕ್ತವನ್ನು ದಾನ ಮಾಡುವ ಮೂಲಕ ಅಲ್ಲಾಹನ ಬಳಿ ಪುಣ್ಯ ಸಂಪಾದಿಸೋಣ. ಕಾರ್ಯಕ್ರಮದ ಯಶಸ್ವಿಯಲ್ಲಿ ನಮ್ಮ ಕೈ ಕೂಡ ಜೋಡಿಸೋಣ.

ಮುತ್ತು ಮುಹಮ್ಮದ್ ಮುಸ್ತಫಾ ﷺ ರ ಪ್ರೀತಿಗೆ ಪಾತ್ರರಾಗಿ, ಮರಣದವರೆಗೆ ನೈಜ ಇಸ್ಲಾಮಿನ ಆಶಯ ಆದರ್ಶಗಳನ್ನು ಎತ್ತಿ ಹಿಡಿದು, ಅಹ್ಲುಸ್ಸುನ್ನತ್ತಿನ ನಿಯಮಗಳಂತೆ ಕಾರ್ಯಚರಿಸಲು ಅಲ್ಲಾಹು ತೌಫೀಖ್ ನೀಡಲಿ-ಆಮೀನ್.

#Donate Blood, Save Life

◾ಜಹಫರ್ ಸಾಧಿಕ್ ಕಟ್ಟದಪಡ್ಪು_
_Campus Secretary_
_Kakyapadavu Unit_

error: Content is protected !! Not allowed copy content from janadhvani.com