janadhvani

Kannada Online News Paper

ಮುಂಡಾಜೆ: ಜಮಲುಲ್ಲೈಲಿ ಮಸ್ಜಿದ್ ನಲ್ಲಿ ನೆರೆ ಸಂತ್ರಸ್ತರಿಗೆ ಧನ ಸಂಗ್ರಹ

ಮುಂಡಾಜೆ: ಇಲ್ಲಿನ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಪ್ರವಾಹ ಸಂತ್ರಸ್ತರಿಗೆ ಧನಸಂಗ್ರಹಿಸುವ ಮೂಲಕ ಸಾಂತ್ವನ ಮತ್ತು ಈ ಬಾರಿ ಸಂಭ್ರಮ ಆಡಂಬರ ಇಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಬಕ್ರೀದ್ ಹಬ್ಬ ಆಚರಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಕಾಜೂರು ತಂಙಳ್ ನಿರ್ದೇಶನದಂತೆ ರಾಜ್ಯ ಸುನ್ನೀ‌ ಕೋರ್ಡಿನೇಶನ್ ಕಮಿಟಿ ಬ್ಯಾನರ್ ನಡಿ ಸಂತ್ರಸ್ತರ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು.

ಜಮಾಅತ್ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಬಕ್ರೀದ್ ಖುತುಬ ಪಾರಾಯಣ ಮತ್ತು ನಮಾಝ್ ಗೆ ನೇತೃತ್ವ ನೀಡಿದರು.

ಜಮಾಅತ್ ಅಧ್ಯಕ್ಷ ಹಮೀದ್ ನೆಕ್ಕರೆ, ಕಾರ್ಯದರ್ಶಿ ಲೆತೀಫ್, ಕೋಶಾಧಿಕಾರಿ ಮುಹಮ್ಮದ್ ಜೈ ಭಾರತ್, ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ, ಮಸ್ಲಕ್ ಸಮಿತಿ ಕಾರ್ಯಾಧ್ಯಕ್ಷ ಹಾಜಬ್ಬ,ಕಾರ್ಯದರ್ಶಿ ಶಬೀರ್, ಸಹಾಯಕ ಧರ್ಮಗುರು ಸಿದ್ದೀಕ್ ಸಖಾಫಿ ಹಿಮಮಿ, ಸಮಿತಿ ಪ್ರಮುಖರಾದ ಉಸ್ಮಾನ್ ಕೂಳೂರು, ರಮ್ಲ ನೆಕ್ಕರೆ, ಕೆರೀಂ ಕೆ.ಎಸ್, ಕೆರೀಂ ಕುರುಡ್ಯ, ಅಬ್ಬಾಸ್, ಸಿದ್ದೀಕ್ ನೆಕ್ಕರೆ, ಇಬ್ರಾಹಿಂ ಕುರುಡ್ಯ, ಎಂಡಿಸಿ ಪ್ರಮುಖರಾದ ಇಬ್ರಾಹಿಂ ಚೆನ್ನಿಗುಡ್ಡೆ, ಪ್ರಮುಖರಾದ ಪುತ್ತಾಕ‌ ಕೂಳೂರು, ಸಿದ್ದೀಕ್ ಸಾಗರ್, ಬಶೀರ್, ಹಮೀದ್ ದರ್ಖಾಸು, ಶರೀಫ್ ನೆಕ್ಕರೆ, ಝಕರಿಯ, ಇಸ್ಮಾಯಿಲ್ ದರ್ಖಾಸ್, ಅಬೂಬಕ್ಕರ್ ಕೂಳೂರು, ಅಬ್ದುಲ್ಲ ಎಸ್, ಅಯೂಬ್ ಆಲಿಕುಂಞಿ ಹಾಗೂ ಮದರಸ ವೇಳೆ ವಿದ್ಯಾರ್ಥಿ ಸಂಘಟನೆ ಎಸ್ ಬಿಎಸ್ ಪದಾಧಿಕಾರಿಗಳು ಭಾಗಿಯಾಗಿದ್ದರು.

ಸಾಮೂಹಿಕ ಪ್ರಾರ್ಥನೆ;
ಇದೇ ಸಂದರ್ಭದಲ್ಲಿ ಜಮಾಅತ್ ನಿಂದ ಅಗಲಿದ ವ್ಯಕ್ತಿಗಳು ಹಾಗೂ ಸುನ್ನೀ ನಾಯಕರುಗಳ ಸ್ಮರಣೆಗೈದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

error: Content is protected !! Not allowed copy content from janadhvani.com