janadhvani

Kannada Online News Paper

ಎಸ್ಸೆಸ್ಸೆಫ್ಫ್ ದ.ಕ ಜಿಲ್ಲಾ ವತಿಯಿಂದ ಯಶಸ್ವಿ ನೂರನೇ ರಕ್ತದಾನ ಶಿಬಿರ

ಮಂಗಳೂರು : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ದ.ಕ ಜಿಲ್ಲಾ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಸೈಬೋ ಇದರ ಯಶಸ್ವಿ ನೂರನೇ ರಕ್ತದಾನ ಶಿಬಿರವು ಇಲ್ಲಿನ ಪುರಭವನದಲ್ಲಿ ಆಗಷ್ಟ್ 18 ಆದಿತ್ಯವಾರದಂದು ನಡೆಯಲಿದೆ.

ದ.ಕ ಜಿಲ್ಲಾ ಎಸ್ಸೆಸ್ಸೆಫ್ಫ್ ಅಧ್ಯಕ್ಷರಾಗಿರುವ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ 500 ದಾನಿಗಳಿಂದ ರಕ್ತದಾನ ನಡೆಯಲಿದ್ದು,ಜಿಲ್ಲೆಯ ಪ್ರತಿಷ್ಟಿತ 5 ಆಸ್ಪತ್ರೆಗಳಾದ,ವೆನ್ಲಾಕ್ ಜಿಲ್ಲಾ ಆಸ್ಪತ್ರೆ,ಎ.ಜೆ,ಲೇಡಿಗೋಷನ್,ಯೆನೆಪೋಯ,ಕೆ.ಎಂ.ಸಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ರಕ್ತ ಸಂಗ್ರಹಣೆ ನಡೆಯಲಿದೆ.

ಜಿಲ್ಲೆಯಲ್ಲಿ 105 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಸುಳ್ಯ,ಬ್ಲಡ್ ಸೈಬೋ ಸ್ಥಾಪಕ ನಾಯಕ ಹಾಗೂ ಎಸ್ ವೈ ಎಸ್ ರಾಜ್ಯಧ್ಯಕ್ಷ ಜಿ.ಎಂ ಸಖಾಫಿ,50 ಬಾರಿ ರಕ್ತದಾನ ಮಾಡಿದ ಇಸ್ಮಾಯಿಲ್ ಮಾಸ್ಟರ್,ಸೇರಿದಂತೆ ಹಲವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಅಧೀನದಲ್ಲಿ ಈ ಹಿಂದೆ ಜಿಲ್ಲೆಯ 99 ಕಡೆಯಲ್ಲಿ ನಡೆದ ರಕ್ತದಾನ ಶಿಬಿರದಿಂದ ಗರಿಷ್ಟ 6412 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು,ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿರುವುದರಿಂದ ಜಾತಿ ಮತಗಳಿಗತೀತವಾಗಿ 7103 ಯುನಿಟ್ ರಕ್ತವನ್ನು ಕೇವಲ ಎರಡು ವರ್ಷದಲ್ಲಿ ದಾನ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಎಸ್ಸೆಸ್ಸೆಫ್ಫ್ ಅಧ್ಯಕ್ಷ ಸಿಟಿಎಂ ತಂಙಳ್ ಮನ್ಶರ್,
ಸ್ತಳೀಯ ಶಾಸಕರಾದ ವೇದವಾಸ್ ಕಾಮತ್,ಯುಟಿ ಕಾದರ್,ಅಲ್ಲದೆ ಮುಸ್ಲಿಂ ಜಮಾಅತ್,ಎಸ್ ವೈ ಎಸ್ ,ಎಸ್ಸೆಸ್ಸೆಫ್ಫ್ ನಾಯಕರು ಹಾಗೂ ವಿವಿಧ ಮುಂದಾಳುಗಳು ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com