janadhvani

Kannada Online News Paper

ಸೌದಿ ರಾಜರ ಅತಿಥಿಗಳಾಗಿ ಈ ಬಾರಿ 1,300 ಮಂದಿ ಹಜ್ ನಿರ್ವಹಿಸಲಿದ್ದಾರೆ

ಮಕ್ಕಾ: ಸೌದಿ ಅರೇಬಿಯಾದ ರಾಜರ ಅತಿಥಿಗಳಾಗಿ ಈ ಬಾರಿ 1,300 ಮಂದಿ ಹಜ್ ನಿರ್ವಹಿಸಲಿದ್ದಾರೆ. ಭಾರತ ಸಹಿತ ವಿಶ್ವದಾದ್ಯಂತ ಎಪ್ಪತ್ತೆರಡು ದೇಶಗಳಿಂದ ಈ ಅತಿಥಿಗಳು ಆಗಮಿಸಲಿದ್ದು, ಧಾರ್ಮಿಕ ಖಾತೆಯ ಅಧೀನದಲ್ಲಿ ಈ ಯೋಜನೆ ಜಾರಿಯಾಗಲಿದೆ.

ಸೌದಿಯ ಧಾರ್ಮಿಕ ಖಾತೆಯ ಅಧೀನದಲ್ಲಿ ಕಾರ್ಯಾಚರಿಸುವ ಖಾದಿಮುಲ್ ಹರಮೈನ್ ಯೊಜನೆಯಡಿ ಈ ಹಜ್ಜಾಜ್‌ಗಳು ಹಜ್ ನಿರ್ವಹಿಸಲಿದ್ದಾರೆ. ಇಪ್ಪತ್ತಮೂರು ವರ್ಷಗಳ ಹಿಂದೆ ಈ ಯೋಜನೆ ಜಾರಿಗೆ ತರಲಾಗಿದ್ದು, ಈವರೆಗೆ ಮಹಿಳೆಯರು,ಪುರುಷರು ಸೇರಿ 52,747 ಮಂದಿ ಈ ಯೋಜನೆಯಡಿ ಅತಿಥಿಗಳಾಗಿ ಹಜ್ ನಿರ್ಹಿಸಿದ್ದಾರೆ.

ವಿಶ್ವದಾದ್ಯಂತ ನೆಲೆಸಿರುವ ಮುಸಲ್ಮಾನರ ಕ್ಷೇಮಕ್ಕಾಗಿ ಸೌದಿ ಆಡಳಿತಾಧಿಕಾರಿ ನೀಡುವ ಪ್ರಾಧಾನ್ಯತೆಯನ್ನು ಈ ಮೂಲಕ ದರ್ಶಿಸಬಹುದು ಎಂದು ಇಸ್ಲಾಮಿಕ್ ಖಾತೆ ಸಚಿವ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಅಝೀಝ್ ಆಲು ಶೈಖ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com