janadhvani

Kannada Online News Paper

ಸೌದಿ ಅರೇಬಿಯಾ: ವಿದೇಶೀ ಅಕೌಂಟೆಂಟ್‌ಗಳ ನೋಂದಣಿ ಕಡ್ಡಾಯ

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶಿ ಅಕೌಂಟೆಂಟ್‌ಗಳಿಗೆ ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ. ಈ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದೇಶೀಯರ ಸಂಪೂರ್ಣ ಮಾಹಿತಿ ಪಡೆಯುವುದು ಮತ್ತು ಅಲ್ಲಿ ಸ್ವದೇಶೀಕರಣ ಜಾರಿಗೊಳಿಸುವ ಯೋಜನೆ ಸುಗಮಗೊಳಿಸುವ ಸಲುವಾಗಿ ಈ ಕ್ರಮ ಎನ್ನಲಾಗಿದೆ.

ಸೌದಿಯಲ್ಲಿ ಕಾರ್ಯಾಚರಿಸುವ ಎಲ್ಲಾ ಅಕೌಂಟೆಂಟ್, ಆಡಿಟರ್‌ಗಳ ಪ್ರೊಫಶನಲ್ ರಜಿಸ್ಟ್ರೇಷನ್ ಕಡ್ಡಾಯಗೊಳಿಸಲು ಕ್ರಮ ಕೈಗೊಲ್ಲಲಾಗುತ್ತಿದ್ದು, ಕಾರ್ಮಿಕ, ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸಹಕಾರದೊಂದಿಗೆ ಯೊಜನೆ ಜಾರಿಗೊಳಿಸಲು ಸೌದಿ ಆರ್ಗನೈಸೇಷನ್ ಫಾರ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ ಆಲೋಚನೆ ನಡೆಸಿದೆ.

ನಕಲಿ ಸರ್ಟಿಫಿಕೇಟ್ ಮೂಲಕ ಅಕೌಂಟೆಂಟ್, ಆಡಿಟರ್ ವೃತ್ತಿಯಲ್ಲಿರುವವರನ್ನು ಪತ್ತೆ ಹಚ್ಚುವುದು ಮತ್ತು ಅಂತಹ ಸರ್ಟಿಫಿಕೇಟ್ ಉಪಯೋಗಿಸಿ ಸೌದಿಯಲ್ಲಿ ಕೆಲಸ ಹುಡುಕುವವರನ್ನು ತಡೆಯುವುದು ಕೂಡ ಈ ಮೂಲಕ ಸಾಧ್ಯವಾಗಲಿದೆ.

ಈ ವಲಯದಲ್ಲಿ ತೊಡಗಿಸಿಕೊಂಡವರ ಸಂಪೂರ್ಣ ಮಾಹಿತಿ ಲಭ್ಯವಾಗಲು ನೋಂದಣಿ ಸಹಾಯಕವಾಗಲಿದೆ ಎಂದು ಸೌದಿ ಆರ್ಗನೈಸೇಷನ್ ಫಾರ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‌ನ ವಕ್ತಾರ ಅಬ್ದುಲ್ಲಾ ಅಲ್ ರಾಜ್ಹಿ ತಿಳಿಸಿದ್ದಾರೆ.

ಅಗತ್ಯವಾದ ವಿವರಗಳನ್ನು ಸಂಬಂಧಿಸಿದ ಖಾತೆಗಳಿಗೆ ರವಾನಿಸಿ, ಆ ಮೂಲಕ ಸ್ವದೇಶೀಕರಣ ಯೋಜನೆ ಜಾರಿಗೊಳಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com