janadhvani

Kannada Online News Paper

ಕಣ್ಣೂರಿಂದ ದುಬೈ, ಕುವೈತ್ ಗೆ ‘ಗೋ ಏರ್’ ಯಾನ ಆರಂಭ

ನವದೆಹಲಿ: ಬಜೆಟ್ ವಿಮಾನ ಕಂಪೆನಿಯಾದ ಗೋ ಏರ್‌ನ ವಿಮಾನಗಳು ಕಣ್ಣೂರಿಂದ ದುಬೈ, ಕುವೈತ್ ಮುಂತಾದೆಡೆಗೂ ಅಲ್ಲಿಂದ ಮರಳಿಯೂ ಎರಡು ಹಾರಾಟ ನಡೆಸಲಿದೆ.

ಈ ಹಾರಾಟಗಳು ಸಹಿತ ಜುಲೈ 19ರಿಂದ ಅದು ಅಂತರ್‌ರಾಷ್ಟ್ರೀಯ ಹಾದಿಯಲ್ಲಿ ಏಳು ಹೊಸ ಹಾರಾಟಗಳನ್ನು ನಡೆಸಲಿದೆ. ದುಬೈ, ಕುವೈತ್ ಮುಂತಾದೆಡೆಗೆ ಗೋ ಏರ್ ಇದೇ ಮೊದಲ ಬಾರಿಗೆ ಹಾರಾಟ ನಡೆಸುತ್ತಿದೆ.

ಪ್ರಸ್ತುತ ಕಣ್ಣೂರಿಂದ ಅಬುಧಾಬಿ, ಮಸ್ಕತ್ ಮುಂತಾದೆಡೆಗೆ ಗೋ ಏರ್ ಹಾರಾಟ ನಡೆಸುತ್ತಿದೆ. ಮುಂಬೈ, ದೆಹಲಿ ಮುಂತಾದೆಡೆಗಳಿಂದ ಅಬುಧಾಬಿ, ಮಸ್ಕತ್, ಬ್ಯಾಂಕಾಕ್ ಮುಂತಾದಡೆಗಳಿಗೆ ದಿನನಿತ್ಯ ಹಾರಾಟ ಪ್ರಾರಂಭಿಸುವುದಾಗಿ ಕಂಪೆನಿ ತಿಳಿಸಿದೆ. ಬೆಂಗಳೂರು, ದೆಹಲಿ, ಮುಂಬೈ ನಗರಗಳಿಂದ ಮಾಲಿದ್ವೀಪ್, ಫುಕೆಟ್‌ಗೆ ಅದು ಹಾರಾಟ ನಡೆಸುತ್ತಿದೆ.

7.2 ಕೋಟಿ ಯಾತ್ರಿಕರು ಇದು ವರೆಗೆ ಗೋ ಏರ್‌ನ ಉಪಯೋಗ ಪಡೆದಿದ್ದಾರೆ. ಎರಡು ವರ್ಷಗಳಲ್ಲಿ ಈ ಅಂಕಿಅಂಶವನ್ನು 10 ಕೋಟಿಗೆ ತಲುಪಿಸುವುದು ಗುರಿಯಾಗಿದೆ ಎಂದು ಗೋ ಏರ್ ‌ನ ಮ್ಯಾನೇಜಿಂಗ್ ಡೈರೆಕ್ಟರ್ ಜೆ. ವಾಡಿಯಾ ತಿಳಿಸಿದ್ದಾರೆ.

error: Content is protected !! Not allowed copy content from janadhvani.com