janadhvani

Kannada Online News Paper

ಝೀನತ್ ಬಕ್ಷ್ ಯತೀಂಖಾನದಲ್ಲಿ ಹಜ್ ತರಬೇತಿ ಯಶಸ್ವಿ

ಮಂಗಳೂರು,ಜು.10: ಪವಿತ್ರ ಹಜ್ ಕರ್ಮ ನಿರ್ವಹಿಸಲು ಹೊರಟಿರುವ ಹಜ್ ಯಾತ್ರಿಕರಿಗೆ ಹಜ್ ಕರ್ಮದ ವಧಿ ವಿಧಾನಗಳನ್ನು ವಿವರಿಸಿಕೊಡುವ ನಿಟ್ಟಿನಲ್ಲಿ ಪ್ರತೀ ವರ್ಷ ಝೀನತ್ ಬಕ್ಷ್ ಯತೀಮ್ ಖಾನ ಇದರ ವತಿಯಿಂದ ನಡೆಸಲ್ಪಡುವ ಹಜ್ ತರಬೇತಿ ಶಿಬಿರವು ಇಂದು ನಡೆಯಿತು.

ಝೀನತ್ ಬಕ್ಷ್ ಯತೀಮ್ ಖಾನ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು: ಇಬ್ರಾಹಿಂ ಬಾವ ಹಾಜಿಯವರು ವಹಿಸಿದ್ದರು.

ಪ್ರಮುಖ ಬರಹಗಾರ, ಚಿಂತಕ ಬಹು: ಎಸ್.ಪಿ ಹಂಝ ಸಖಾಫಿ ಉಸ್ತಾದರು ಹಜ್ಜಾಜಿಗಳಿಗೆ ತರಬೇತಿ ನಡೆಸಿಕೊಟ್ಟರು.

ಹಜ್ ಗೆ ತೆರಳಲಿಚ್ಛಿಸಿರುವ ನೂರಾರು ಮಂದಿ ಭಾಗವಹಿಸಿ, ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ ಅಶ್ರಫ್, ಝೀನತ್ ಬಕ್ಷ್ ಯತೀಮ್ ಖಾನ ಟ್ರಸ್ಟ್ ಸದಸ್ಯರಾದ ಶಮೀಮ್ ಹಾಜಿ ಬಂದರ್, ಮುಸ್ತಫ ಹಾಜಿ ಬಂದರ್, ರಶೀದ್ ಹಾಜಿ ಪಾಂಡೇಶ್ವರ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com