janadhvani

Kannada Online News Paper

ದುಬೈ ‘ಡ್ಯೂಟಿ ಫ್ರೀ’ ಯಲ್ಲಿ ಭಾರತೀಯ ಕರೆನ್ಸಿಯಲ್ಲೇ ಶಾಪಿಂಗ್ ಮಾಡಲು ಅವಕಾಶ

ದುಬೈ: ಭಾರತೀಯರಾದ ದುಬೈ ಸಂದರ್ಶಕರಿಗೆ ಶುಭ ಸುದ್ದಿ. ಇನ್ನು ಮುಂದೆ ದುಬೈ ವಿಮಾನ ನಿಲ್ದಾಣದಲ್ಲಿರುವ ಡ್ಯುಟಿ ಫ್ರೀ ಶಾಪ್‌ಗಳಿಂದ ಭಾರತೀಯ ಹಣ ನೀಡಿ ಖರೀದಿ ನಡೆಸಬಹುದಾಗಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂರು ಟರ್ಮಿನಲ್‌ಗಳು ಮತ್ತು ಅಲ್ ಮಖ್ತೂಂ ವಿಮಾನ ನಿಲ್ದಾಣದಲ್ಲೂ ಇನ್ನು ಮುಂದೆ ಭಾರತೀಯ ಕರೆನ್ಸಿಗೆ ಮೌಲ್ಯ ಲಭಿಸಲಿದೆ.

ಈ ಹಿಂದೆ ಭಾರತೀಯ ರೂಪಾಯಿಗಳನ್ನು ಡಾಲರ್, ದಿರ್ಹಂ ಅಥವಾ ಯೂರೋ ಆಗಿ ಪರಿವರ್ತಿಸಿ ಖರೀದಿ ನಡೆಸಬೇಕಾಗಿತ್ತು. ದುಬೈ ಡ್ಯೂಟಿ ಫ್ರೀ ವಿನಿಮಯ ನಡೆಸಬಹುದಾದ ಹದಿನೇಳನೇ ಕರೆನ್ಸಿಯಾಗಿದೆ ಭಾರತೀಯ ಕರೆನ್ಸಿ. ದುಬೈ ಒಳಪಡುವ ಯುಎಇಯಲ್ಲಿ ವಿಶ್ವದಲ್ಲೇ ಅತೀ ಹೆಚ್ಚಿನ ಭಾರತೀಯರಿದ್ದಾರೆ.

ದಿನವಹಿ ಸಾವಿರಾರು ಭಾರತೀಯರು ಸಂದರ್ಶಕರಾಗಿಯೂ ಯುಎಇಗೆ ಆಗಮಿಸುತ್ತಿದ್ದಾರೆ. ಹೊಸ ಯೋಜನೆಯು ಸಂದರ್ಶಕರಿಗೆ ಹೆಚ್ಚಿನ ಉಪಯೋಗ ನೀಡಲಿದೆ.

ಡ್ಯೂಟಿ ಫ್ರೀ ಮೂಲಕ 2018ರಲ್ಲಿ 2.015 ಬಿಲಿಯನ್ ಡಾಲರ್ (13,800 ಕೊಟಿ ಭಾರತೀಯ ರೂಪಾಯಿ) ವಿನಿಮಯ ನಡೆದಿತ್ತು. ದಿನದ 24 ಗಂಟೆಯೂ ಕಾರ್ಯಾಚರಿಸುವ ಇಲ್ಲಿ 47 ರಾಷ್ಟ್ರಗಳ 6100 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ 38,00 ಚ.ಅ. ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಾರವನ್ನು ನಡೆಸಲಾಗುತ್ತಿದೆ.

error: Content is protected !! Not allowed copy content from janadhvani.com