janadhvani

Kannada Online News Paper

ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಜುಲೈ 5 ರಂದು ಮಂಡನೆ

ನವದೆಹಲಿ: ಬರುವ ಶ್ರುಕವಾರ ಮಂಡಿಸಲಿರುವ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ನಲ್ಲಿ ನೀರಿನ ತೊಂದರೆಗಳು, ಭೂ ರಹಿತ ಕಾರ್ಮಿಕರಿಗೆ ಕ್ರಮಗಳು, ಮತ್ತು ಉದ್ಯೋಗ ಸೃಷಿಗೆ ಒತ್ತು ನೀಡುವ ಮೂಲಕ ಜನಪರದಿಂದ ಕೂಡಿರುವ ಸಾಧ್ಯತೆ ಇದೆ ಎಂದು ಎಂದು ಮೂಲಗಳಿಂದ ತಿಳಿದುಬಂದಿದೆ.

ಮುಂದಿನ ಆರೇಳು ತಿಂಗಳುಗಳಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯವಾಗಿ ನಿರ್ಣಾಯಕ ವಿಷಯಗಳಿಗೆ ಸಂಬಂಧಿಸಿದ ಕ್ರಮಗಳಲ್ಲದೆ, ಧನ್ಯವಾದಪೂರ್ವಕವಾಗಿ ಬಜೆಟ್ ಮಂಡಿಸಬಹುದು ಎನ್ನಲಾಗುತ್ತಿದೆ. ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮ ವರ್ಗದವರು ನೀಡಲಾದ ಪರಿಹಾರವನ್ನು ಶೂನ್ಯ ತೆರಿಗೆ ಸ್ಲ್ಯಾಬ್‌ನೊಂದಿಗೆ 5 ಲಕ್ಷ ರೂ.ಗೆ ಏರಿಸಬಹುದು ಎಂದು ನಿರೀಕ್ಷಿಸಬಹುದಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.ಆರ್ಥಿಕ ಅಭಿವೃದ್ಧಿ ಬಗ್ಗೆ ಐದು ವರ್ಷಗಳ ಯೋಜನೆ ರೂಪಿಸಲಿದ್ದು, ಮೂರು ರಾಜಕೀಯ ವಿಷಯಗಳಿಗೆ ಒತ್ತು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕೃಷಿ ಕಾರ್ಮಿಕರು ಸೇರಿದಂತೆ ಭೂ ರಹಿತ ಕಾರ್ಮಿಕರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಬೆಂಬಲ ಬೆಲೆಯನ್ನು ವಾರ್ಷಿಕ ಆರು ಸಾವಿರ ರೂಪಾಯಿಗೆ ಘೋಷಿಸುವ ಸಾಧ್ಯತೆ ಇದೆ.ನೀರಾವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.
ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದ್ದು, ಅಂತರ್ಜಲ ವೃದ್ಧಿ ಹಾಗೂ ಬರ ತಗ್ಗಿಸುವ ನಿಟ್ಟಿಸುವ ಜಲಮೂಲಗಳನ್ನು ಪುನಶ್ಚೇತನಗಳಿಸಲು ಸ್ವಚ್ಛ ಭಾರತ ಕಾರ್ಯಕ್ರಮದ ಯಶಸ್ಸುನ್ನು ಪುನರಾವರ್ತಿಸಲು ಮೋದಿ ಉತ್ತುಕರಾಗಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ನೀರಿನ ತೊಂದರೆಯನ್ನು ನಿವಾರಿಸಲು ಹಣಕಾಸು ಹಂಚಿಕೆ ಮಾಡಲಿದ್ದು, ರಾಜ್ಯಗಳ ಆದ್ಯತೆಗಳೊಂದಿಗೆ ಕೇಂದ್ರಸರ್ಕಾರ ನಾಯಕತ್ವದ ಪಾತ್ರ ವಹಿಸಿಕೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

error: Content is protected !! Not allowed copy content from janadhvani.com