janadhvani

Kannada Online News Paper

ಹಜ್: ಮೀನಾದಲ್ಲಿ ಇದೇ ಮೊದಲ ಬಾರಿಗೆ ಬಹು ಮಹಡಿ ಡೇರೆಗಳು

ಮಕ್ಕಾ: ಹಜ್ಜಾಜ್‌ಗಳ ಸೌಕರ್ಯಗಳನ್ನು ನವೀಕರಿಸುವ ಭಾಗವಾಗಿ ಮಿನಾದಲ್ಲಿ ಬಹುಮಹಡಿ ಡೇರೆಗಳನ್ನು ಸ್ಥಾಪಿಸಲಾಗಿದೆ. ಎರಡು ಅಂತಸ್ತಿನ ಡೇರೆಗಳನ್ನು ಸ್ಥಾಪಿಸುವ ಮೂಲಕ ಕಡಿಮೆ ಜಾಗದಲ್ಲಿ ಹೆಚ್ಚಿನ ಹಜ್ಜಾಜ್‌ಗಳಿಗೆ ಉಳಿದುಕೊಳ್ಳುವುದು ಸಾಧ್ಯವಾಗಲಿದೆ. ಅರಬ್ ದೇಶೀಯರಿಗಾಗಿ ಕಾರ್ಯಾಚರಿಸುವ ಮುತವ್ವುಫ್‌ನ ಅಡಿಯಲ್ಲಿ ಈ ಬಾರಿ ಬಹುಮಹಡಿ ಡೇರೆಗಳನ್ನು ಪರೀಕ್ಷಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಎರಡಂತಸ್ತಿನ ಡೇರೆಗಳನ್ನು ಸ್ಥಾಪಿಸಲಾಗುತ್ತಿದ್ದು, ವಿಷನ್ 2030 ರ ಭಾಗವಾಗಿ ಹಜ್ಜಾಜ್‌ಗಳ ಸಂಖ್ಯೆ ಹೆಚ್ಚಿಸುವುದು ಈ ಯೋಜನೆಯ ಗುರಿಯಾಗಿದೆ.ಅಗ್ನಿ ನಿರೋಧಕ ಡೇರೆಗಳು ಹೆಚ್ಚಿನ ಯಾರ್ತಾರ್ಥಿಗಳಿಗೆ ಸೌಕರ್ಯ ಒದಗಿಸಲಿದೆ.

ಕೆಳಗಿನ ಅಂತಸ್ತನ್ನು ಕೆಲಸಗಾರರು ಮತ್ತು ಸಾಮಾಗ್ರಿಗಳಿಗಾಗಿ ಉಪಯೋಗವಾಗಲಿದ್ದು, ಮೇಲಿನ ಮಹಡಿಯಲ್ಲಿ ಹಜ್ಜಾಜ್‌ಗಳು ಉಳಿದುಕೊಳ್ಳಲಿದ್ದಾರೆ. ಈ ಮೂಲಕ ಪ್ರತೀ ಡೇರೆಗಳಲ್ಲಿ ಎಂಟು ಮಂದಿಗಳಿಗೆ ಹೆಚ್ಚುವರಿಯಾಗಿ ಸೌಕರ್ಯ ದೊರೆಯಲಿದೆ. ಸುಲಭವಾಗಿ ಈ ಡೇರೆಗಳನ್ನು ಇತರ ಕಡೆಗೆ ಸ್ಥಳಾಂತರ ಮಾಡಬಹುದಾಗಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com