janadhvani

Kannada Online News Paper

ಜುಲೈ 1ರಿಂದ ಬೆಂಗಳೂರು-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ವೇಗ ಹೆಚ್ಚಳ

ಮೈಸೂರು: ಜುಲೈ 1ರಿಂದ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ವೇಗ ಹೆಚ್ಚಿಸಲಾಗುತ್ತಿದ್ದು, 1:55 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಸಂಚರಿಸಲಿದೆ.

ನೈಋತ್ಯ ರೈಲ್ವೆ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು 1 ಗಂಟೆ 55 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ಅಂತರವನ್ನು ಕ್ರಮಿಸಲಿದೆ. ಮೈಸೂರಿನಿಂದ ಅಪರಾಹ್ನ 2:15ಕ್ಕೆ ಹೊರಡುವ ರೈಲು ಸಂಜೆ 4:10ಕ್ಕೆ ಬೆಂಗಳೂರು ತಲುಪುತ್ತದೆ ಎಂದು ನೈಋತ್ಯ ರೈಲ್ವೇ ಅಧಿಕಾರಿ ತಿಳಿಸಿದರು.

ಜುಲೈ 1ರಿಂದ ಶತಾಬ್ದಿ ಎಕ್ಸ್‌ಪ್ರೆಸ್ ಮಾತ್ರವೇ ಅಲ್ಲ, ಇನ್ನೂ ಹಲವು ರೈಲುಗಳ ವೇಗ ಹೆಚ್ಚಲಿದೆ. ಚೆನ್ನೈ- ಮೈಸೂರು ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ವೇಗವನ್ನು ಗಂಟೆಗೆ 10 ನಿಮಿಷಗಳನ್ನು ಹೆಚ್ಚಿಸಲಾಗಿದೆ. ಹುಬ್ಬಳ್ಳಿ-ಬೆಂಗಳೂರು- ಮೈಸೂರು ನಡುವಣ ವಿಶ್ವಮಾನವ ಎಕ್ಸ್‌ಪ್ರೆಸ್‌ ವೇಗವನ್ನು 15 ನಿಮಿಷಗ ಹೆಚ್ಚಿಸಲಾಗಿದೆ. ಹೊಸದಾಗಿ ಆರಂಭಿಸಲಾದ ಕಾಚಿಗುಡ ಎಕ್ಸ್‌ಪ್ರೆಸ್‌ ಮೈಸೂರು ಮತ್ತು ಬೆಂಗಳೂರು ನಡುವೆ 15 ನಿಮಿಷಗಳಷ್ಟು ವೇಗ ವರ್ಧಿಸಿಕೊಳ್ಳಲಿದೆ. ಹಳಿ ದ್ವಿಗುಣ ಮತ್ತು ವಿದ್ಯುದೀಕರಣ ಸೇರಿದಂತೆ ಹಲವು ಸುಧಾರಣೆಗಳ ಪರಿಣಾಮ ರೈಲುಗಳ ವೇಗ ಹೆಚ್ಚಳಗೊಂಡಿದೆ ಎಂದು ನೈಋತ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯ ತಿಳಿಸಿದರು.

ಜುಲೈ 1ರಿಂದ ಜಾರಿಗೆ ಬರಲಿರುವ ನೂತನ ವೇಳಾಪಟ್ಟಿ www.irctc.co.in ಮತ್ತು and www.indianrail.gov.in ಜಾಲತಾಣಗಳಲ್ಲಿ ಲಭ್ಯವಿದೆ ಎಂದು ನೈಋತ್ಯ ರೈಲ್ವೇ ತಿಳಿಸಿದೆ.

error: Content is protected !! Not allowed copy content from janadhvani.com