janadhvani

Kannada Online News Paper

ಪಾದಾಚಾರಿಗಳು ಎಚ್ಚರಿಕೆ ವಹಿಸುವಂತೆ ಅಲ್ ಐನ್ ಸಂಚಾರಿ ಪೋಲೀಸ್

ಅಲ್ ಐನ್: ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಕಾರ್ಯಕ್ಷಮತೆಗೊಳಿಸಲು ಮತ್ತು ವಾಹನ ಯಾತ್ರಿಕರ ಸುರಕ್ಷತೆಯನ್ನು ಇನ್ನಷ್ಟು ಖಾತರಿಸಿಗೊಳಿಸಲು ಅಲ್ ಅಫ್ಲಾಜ್ (ನಂಬರ್ 115), ಅಲ್ ಖಸ್ರ್ (ನಂಬರ್ (118), ಅಲ್ ಅಹ್ಲಿಯಾ (ನಂಬರ್ 166), ರೋಟಾನ ಇಂಟರ್‌ಸೆಕ್ಷನ್ ಎನ್ನುವ ನಾಮದೇಯದಲ್ಲಿ ತಿಳಿಯಲ್ಪಡುವ ನಂಬರ್ 177 ಮುಂತಾದವುಗಳನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ ಎಂದು ಅಲ್ ಐನ್ ಸಿಟಿ ಮುನಿಸಿಪಾಲಿಟಿ ಎಸಿಎಂ, ಅಬುಧಾಬಿ ಜನರಲ್ ಸರ್ವೀಸಸ್ ಕಂಪೆನಿ ಮುಸಾನದ ಸಂಯುಕ್ತವಾಗಿ ತಿಳಿಸಿದೆ.

ಅಲ್ ಐನ್‌ನ ನಗರ ಪ್ರದೇಶಗಳಲ್ಲಿ 43.8 ಕೋಟಿ ದಿರ್ಹಂ ವೆಚ್ಚದಲ್ಲಿ ಮುಸಾನದ ಜಾರಿಗೆ ತರುತ್ತಿರುವ ಯೋಜನೆ ಇದಾಗಿದೆ. ಅಬುಧಾಬಿ ಇಂಟಗರೇಟಡ್ ಟ್ರಾನ್ಸ್‌ಪೋರ್ಟ್‌ ಸೆಂಟರ್ ಐಟಿಸಿ, ಅಬುಧಾಬಿ ಪೊಲೀಸ್ ಕಾರ್ಯಾಲಯ ಪಿಎಚ್ ಕ್ಯು ಇವುಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದೆ.

ಇದು ಪ್ರದೇಶದ ರಸ್ತೆಗಳ ಟ್ರಾಫಿಕ್ ಚಲನ ಸಂಯೋಜನೆಗೆ ಅನುಗುಣವಾಗಲಿದೆ. ರಸ್ತೆಗಳು ನೀಡುವ ಸೇವೆಗಳ ಮಟ್ಟವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಐಟಿಸಿಯ ಪ್ರಕಟನೆ ತಿಳಿಸಿದೆ. ಹೊಸ ರಸ್ತೆಗಳ ಅಭಿವೃದ್ಧಿಯು ಎಮಿರೇಟ್ಸ್‌ನ ಆರ್ಥಿಕ, ಸಾಮಾಜಿಕ, ಪರಿಸರ ಅಭಿವೃದ್ಧಿ ಪ್ರಕ್ರಿಯಗೆ ಬಲ ನೀಡಲಿದೆ. ಮತ್ರವಲ್ಲದೆ ಹೆಚ್ಚಾದ ಜನಸಂಖ್ಯೆ ಮತ್ತು ನಗರಾಭಿವೃದ್ಧಿಗೆ ಸಂಭಂಧಿಸಿದ ಸುರಕ್ಷಿತ ಹಾಗೂ ಸ್ಥಿರವಾದ ಸಂಚಾರ ವ್ಯವಸ್ಥೆ ಜಾರಿಗೆ ತರುವ ಮೂಲಕ ಅಬುಧಾಬಿ ಎಮಿರೇಟ್ಸ್‌ನ ಮೇಲ್ಮೈ ಸಂಚಾರ ಮಾಸ್ಟರ್ ಪ್ಲಾನ್‌ನ ಅವಶ್ಯವನ್ನು ಕಾರ್ಯಗತಗೊಳಿಸುವ ಪರಿಶ್ರಮಗಳನ್ನು ಹೊಸ ಯೋಜನೆ ಬೆಂಬಲಿಸಲಿದೆ ಎಂದು ಐಟಿಸಿ ತಿಳಿಸಿದೆ.

ಅಲ್ ಐನ್ ನಗರದಲ್ಲಿ ಜಾರಿಗೆ ಬರಲಿರುವ ಯೋಜನೆಯು ಚಾಲಕರು ಮತ್ತು ರಸ್ತೆಬದಿಯ ಯಾತ್ರಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ ಎಂದು ಅಬುಧಾಬಿ ಪೊಲೀಸ್ ಜಿಎಚ್‌ಕ್ಯು ಬರವಸೆ ನೀಡಿದೆ.

error: Content is protected !! Not allowed copy content from janadhvani.com