janadhvani

Kannada Online News Paper

ಅಮೆರಿಕಾ-ಇರಾನ್ ಬಿಕ್ಕಟ್ಟು,ಕಠಿಣ ವಿಷಯ-ಎಸ್. ಜೈಶಂಕರ್

ಗಾಂಧಿನಗರ. ಜೂನ್,25: ಅಮೆರಿಕಾ ಹಾಗೂ ಇರಾನ್ ನಡುವಣ ಪ್ರಸಕ್ತ ಪರಿಸ್ಥಿತಿ ಕಠಿಣ ಅಂತರಾಷ್ಟ್ರೀಯ ವಿಷಯಗಳ ಪೈಕಿ ಒಂದಾಗಿದ್ದು, ಭಾರತ ಅದನ್ನು ಸೂಕ್ತವಾಗಿ ನಿಭಾಯಿಸಲಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರ ಭಾರತ ಭೇಟಿ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಿದ್ದಾರೆ.

ಗುಜರಾತ್ ವಿಧಾನಸಭೆಯಿಂದ ನಡೆಯುತ್ತಿರುವ ರಾಜ್ಯಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಪಕ್ಷದ ರಾಜ್ಯಘಟಕದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ, ಅತ್ಯಂತ ಕ್ಲಿಷ್ಟ ಸ್ವರೂಪದ ಹಲವು ಅಂತರಾಷ್ಟ್ರೀಯ ಸಮಸ್ಯೆಗಳನ್ನು ನಿಭಾಯಿಸುತ್ತಿದೆ. ಅಮೆರಿಕಾ ಮತ್ತು ಇರಾನ್ ನಡುವಣ ಪ್ರಸ್ತುತ ಬಿಗುವಿನ ಪರಿಸ್ಥಿತಿ ಆ ಪೈಕಿ ಒಂದಾಗಿದೆ ಆದಾಗ್ಯೂ, ರಾಷ್ಟ್ರೀಯ ಹಿತಾಸಕ್ತಿಗಳ ಗಮದಲ್ಲಿರಿಸಿಕೊಂಡು ಭಾರತ ತನ್ನ ಅಂತಿಮ ನಿಲುವು ಕೈಗೊಳ್ಳಲಿದೆ ಜೈಶಂಕರ್ ಹೇಳಿದರು.

ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮೂರು ದಿನಗಳ ಭಾರತ ಭೇಟಿ ಕುರಿತು ಮಾತನಾಡಿದ ಅವರು, ಪಾಂಪಿಯೋ ಭಾರತ ಭೇಟಿಯ ವೇಳೆ ತಮ್ಮೊಂದಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 2019ರ ಸಾರ್ವರ್ತಿಕ ಚುನಾವಣೆಯ ನಂತರ ಅಮೆರಿಕಾದ ಉನ್ನತ ಮಟ್ಟದ ಸಚಿವರೊಬ್ಬರು ಮೊದಲ ಭಾರಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ಭಾರತ ಹಾಗೂ ಅಮೆರಿಕಾ ನಡುವಣ ನಡೆದಿರುವ ವಾಣಿಜ್ಯ ಸುಂಕ ಹಾಗೂ ಪ್ರತಿ ಸುಂಕ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಮ್ಮೆ ಇಂತಹ ವಿವಾದಗಳು ಸೃಷ್ಟಿಯಾಗುತ್ತವೆ. ರಾಜ ತಾಂತ್ರಿಕ ಮಧ್ಯಪ್ರವೇಶಗಳು ಉಭಯ ದೇಶಗಳಿಗೆ ಲಾಭವಾಗುವಂತಹ ನೆಲೆ ಗಟ್ಟಿನ ಮೇಲೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

error: Content is protected !! Not allowed copy content from janadhvani.com