janadhvani

Kannada Online News Paper

ಕೆ.ಸಿ.ಎಫ್ ದುಬೈ ಸೌತ್ ಝೋನ್: ಅಲ್ ಕೂಝ್ ಸೆಕ್ಟರ್ ನ ಸಾರಥಿಗಳು

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಷನ್ ದುಬೈ ಸೌತ್ ಝೋನ್ ಇದರ ಅಧೀನ ದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಕೂಝ್ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 21.06.2019 ರಂದು ಅಲ್ ನಗರದ ಸಿಟಿ ಡೈಮಂಡ್ ಹೋಟೆಲ್‌ ಸಭಾಂಗಣದಲ್ಲಿ ಶರೀಪ್ ದೇರಳಕಟ್ಟೆಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಹರೇಕಳ ಸಭೆಯ ಅತಿಥಿಗಳನ್ನು ಸ್ವಾಗತಿಸಿದರು.ಇಲ್ಯಾಸ್ ಮದನಿ ಬರ್ಷ ಉಸ್ತಾದ್ ರವರ ದುಆಃ ದೊಂದಿಗೆ ಪ್ರಾರಂಭಗೊಂಡ ಸಭೆಯನ್ಬು ರಫೀಕ್ ಮದನಿ ಹರೇಕಳ ಉದ್ಘಾಟಿಸಿದರು. ನಂತರ ಮನ್ಸೂರ್ ಹರೇಕಳ 2018 -19 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ವನ್ನು ಸಭೆಯಲ್ಲಿ ಮಂಡಿಸಿದರು ವರದಿ ಹಾಗೂ ಲೆಕ್ಕ ಪತ್ರವನ್ನು ಸರ್ವಾನನುಮತದಿಂದ ಅಂಗೀಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಎಸ್.ಎಸ್.ಎಫ್.ನಾಯಕ ಅಶ್ರಫ್ ಅಮ್ಜದಿ ಯವರು‌ ಸಂಘಟನೆಯ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ಭಾಷಣ ಗೈದರು.ಚುನಾವಣಾ ವೀಕ್ಷಕರಾಗಿ ಆಗಮಿಸಿದ ಝೋನ್ ಕಾರ್ಯದರ್ಶಿ ರಫೀಕ್ ಕಲ್ಲಡ್ಕ ರವರು ಸದರಿ ಸಮಿತಿಯನ್ನು ಬರ್ಖಾಸು ಗೊಳಿಸಿ ಹೊಸ ಸಮಿತಿಗೆ ಚಾಲನೆ ನೀಡಿದರು.

ನೂತನ ಸಮಿತಿಯ ವಿವರ :
ಅಧ್ಯಕ್ಷರು : ಅಬ್ದುಲ್ ಅಝೀಝ್ ಕೆದಿಲ
ಪ್ರಧಾನ ಕಾರ್ಯದರ್ಶಿ: ಅನ್ಸಾರ್ ಕುಪ್ಪೆಟ್ಟಿ
ಕೋಶಾಧಿಕಾರಿ :ನಾಸಿರ್ ಪರಪ್ಪು
ಪಬ್ಲಿಕೇಷನ್ ವಿಭಾಗ :
ಅಧ್ಯಕ್ಷರು : ಸಫ್ವಾನ್ ಪುತ್ತೂರು ಕಾರ್ಯದರ್ಶಿ : ಸಿದ್ದೀಖ್ ಮೆಲ್ಕಾರ್
ಶಿಕ್ಷಣ ವಿಭಾಗ :
ಅಧ್ಯಕ್ಷರು : ಹಬೀಬ್ ಪುಣಚ
ಕಾರ್ಯದರ್ಶಿ : ಆರೀಫ್ ಬೆಳ್ಮ
ಸಾಂತ್ವನ ವಿಭಾಗ :
ಅಧ್ಯಕ್ಷರು : ನಝೀರ್ ಕುಕ್ಕಾಜೆ
ಕಾರ್ಯದರ್ಶಿ: ಮುಹಮ್ಮದ್ ಆಲಿ ವಳವೂರು
ಇಹ್ಸಾನ್ ವಿಭಾಗ :
ಅಧ್ಯಕ್ಷರು : ಅಬ್ದುಲ್ಲಾ ಉಳ್ಳಾಲ
ಕಾರ್ಯದರ್ಶಿ : ಜಬ್ಬಾರ್ ಉಪ್ಪಿನಂಗಡಿ

ನಂತರ ಸಂಘಟನಾ ವಿಭಾಗದ ಝೋನ್ ನಾಯಕರಾದ ರಹ್ಮಾನ್ ಉಳ್ಳಾಲ ರವರು ಸಂಘಟನಾ ಜವಾಬ್ದಾರಿಯನ್ನು ವಿವರಿಸಿದರು. ನಂತರ ಇಲ್ಯಾಸ್ ಮದನಿ ಉಸ್ತಾದ್ ರವರು ಸಂಘಟನೆಯ ಅನಿವಾರ್ಯತೆಯ ಬಗ್ಗೆ ವಿವರಿಸಿ ಸದಸ್ಯರಿಗೆ ಹಿತ ವಚನವನ್ನು ನೀಡುತ್ತಾ ಶುಭ ಹಾರೈಸಿ ಮಾತನಾಡಿದರು.
ಅಲ್ ಬರ್ಸ ಮತ್ತು ಅಲ್ ವಾಹ ಯುನಿಟ್ ಅಧ್ಯಕ್ಷರಾದ ಇಲ್ಯಾಸ್ ನಂದಾವರ,ಹಾಗೂ ಹನೀಫ್ ಬೆಂಗರೆ ಶುಭ ಹಾರೈಸಿ ಮಾತ ನಾಡಿದರೆ, ನಿಕಟ ಪೂರ್ವ ಅದ್ಯಕ್ಷ ಶರೀಪ್ ದೇರಳಕಟ್ಟೆ ಯವರು ಕಳೆದೆರಡು ವರ್ಷಗಳಿಂದ ಕೆ.ಸಿ.ಎಫ್ ಅಲ್ ಕೂಝ್ ಸೆಕ್ಟರ್ ನೋಂದಿಗೆ ಸಹಕರಿಸಿದ ಎಲ್ಲಾ ನಾಯಕರನ್ನು ಸ್ಮರಿಸುತ್ತಾ,ನೂತನ ಸಮಿತಿ ಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆಯೊಂದಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ನಿರ್ವಹಣೆ ಯನ್ನು ಶರೀಫ್ ಪಡೀಲ್ ನೆರವೇರಿಸಿದರು. ನೂತನ ಅದ್ಯಕ್ಷ ಅಬ್ದುಲ್ ಅಝೀಝ್ ಕೆದಿಲ ಪ್ರಾಸ್ತಾವಿಕ ಭಾಷಣಗೈದರು.
ಕೊನೆಯಲ್ಲಿ 11 ನಾರಿಯತ್ ಸ್ವಲಾತ್ ಪಠಿಸುವ ಮೂಲಕ ಲೆಕ್ಕ ಪತ್ರ ಹಾಗೂ ಇತರ ದಾಖಲೆಗಳನ್ನು ನೂತನ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ನೂತನ ಕಾರ್ಯದರ್ಶಿ ಅನ್ಸಾರ್ ಕುಪ್ಪೆಟ್ಟಿ ಯವರ ಧನ್ಯವಾದ ಹೇಳಿದರು. ಸ್ವಲಾತ್ ನೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

error: Content is protected !! Not allowed copy content from janadhvani.com