janadhvani

Kannada Online News Paper

ತಾಪಮಾನದಲ್ಲಿ ಏರಿಕೆ: ಕೆಲಸ ಸಮಯದಲ್ಲಿ ಬದಲಾವಣೆ

ಕುವೈತ್ ಸಿಟಿ: ತಾಪಮಾನದಲ್ಲಿ ಏರಿಕೆ ಕಂಡು ಬಂದಿದ್ದು, ಶುಚೀಕರಣ ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ ತರಲಾಗಿದ್ದು, ಮುಂಜಾನೆ ಮೂರರಿಂದ ಅಪರಾಹ್ನ 11ರ ವರೆಗೆ ಪರಿಷ್ಕೃತ ಕೆಲಸದ ಸಮಯವಾಗಿದೆ.

ವಿಶ್ವದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಉಷ್ಣತೆ ಕಂಡುಬಂದ ಎರಡು ದೇಶಗಳ ಪೈಕಿ ಒಂದು ಕುವೈತ್ ಆಗಿದೆ. 2016ರ ಜುಲೈ 21ಕ್ಕೆ ಕುವೈತ್‌ನ ಮಿತ್ರಿಬಾದಲ್ಲಿ ಅತೀ ಹೆಚ್ಚಿನ ಉಷ್ಣತೆ ಕಂಡು ಬಂದಿದ್ದು, ಅಂದು 53.9ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ ಕೂಡ ಕುವೈತ್ ‌ನಲ್ಲೇ ಹೆಚ್ಚಿನ ಅಂದರೆ 52 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.

ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಉಷ್ಣತೆಯು 60 ಡಿಗ್ರಿ ಸೆಲ್ಸಿಯಸ್ ‌ಗೆ ಮೇಲೆ ಹೋಗಲಿರುವುದಾಗಿ ಹವಾಮಾನ ಪರಿಣಿತರು ತಿಳಿಸಿದ್ದಾರೆ. ಸೂರ್ಯ ತಾಪವು ನೇರವಾಗಿ ತಗುಲುವ ಹೊರಗಿನ ಕೆಲಸಗಾರ ಕೆಲಸದ ಸಮಯದಲ್ಲಿ ಅಪರಾಹ್ನ 11ರಿಂದ ಸಂಜೆ 5ರವರೆಗೆ ಸರಕಾರ ನಿಷೇಧ ಹೇರಿತ್ತು. ಅಲ್ಲದೆ ಉಷ್ಣತೆ ಏರುವ ಆಗಸ್ಟ್ ವರೆಗೆ ಹೊರಗಿನ ಕೆಲಸಗಾರರ ಕೆಲಸದ ಸಮಯ ಸಂಜೆ ಐದರ ಬಳಿಕ ಮಾಡಬೇಕು ಎಂದು ಸಂಸತ್‌ನಲ್ಲಿ ಒತ್ತಡ ಕೇಳಿಬಂದಿತ್ತು.

error: Content is protected !! Not allowed copy content from janadhvani.com