janadhvani

Kannada Online News Paper

ಮಧ್ಯಾಹ್ನದ ವಿಶ್ರಾಂತಿ ಕಡ್ಡಾಯ- ಕಾನೂನು ಉಲ್ಲಂಘನೆ ವಿರುದ್ಧ ಕಠಿಣ ಕ್ರಮ

ಕುವೈತ್ ಸಿಟಿ: ಮಧ್ಯಾಹ್ನದ ವಿಶ್ರಾಂತಿ ಸಮಯವನ್ನು ಪಾಲಿಸದ ಉದ್ಯೋಗದಾತರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ನಿಷೇಧಿತ ಸಮಯಗಳಲ್ಲಿ ಕಾರ್ಮಿಕರು ಕೆಲಸ ಮಾಡುವುದು ಕಂಡು ಬಂದರೆ ಆ ಬಗ್ಗೆ ಮಾಹಿತಿ ನೀಡುವಂತೆ ಕುವೈತ್ ಹ್ಯೂಮನ್ ರೈಟ್ಸ್ ಸೊಸೈಟಿಯು ಸಾರ್ವಜನಿಕರಿಗೆ ತಿಳಿಸಿದೆ.

ಮಧ್ಯಾಹ್ನದ ಹೊತ್ತು ಕಾರ್ಮಿಕರು ದುಡಿಯುವುದು ಕಂಡು ಬಂದಲ್ಲಿ 5564333 ಎನ್ನುವ ವಾಟ್ಸ್ ಆ್ಯಪ್ ಸಂಖ್ಯೆಗೆ ಮಾಹಿತಿ ನೀಡುವಂತೆ ಸೊಸೈಟಿಯು ತಿಳಿಸಿದ್ದು, ಆ ಬಗ್ಗೆ ಮಾಹಿತಿ ಒದಗಿಸುವ ಫೋಟೋ, ವೀಡಿಯೋಗಳನ್ನೂ ಮೇಲೆ ಕಾಣಿಸಿದ ಸಂಖ್ಯೆಗೆ ರವಾನಿಸಬಹುದಾಗಿದೆ.

ಕೆಲಸಗಾರರ ಸುರಕ್ಷೆತೆಗೆ ಆಧ್ಯತೆ ನೀಡುವ ಸಲುವಾಗಿ ಸರಕಾರ ಮಧ್ಯಾಹ್ನದ ಅವಧಿಯನ್ನು ವಿಶ್ರಾಂತಿ ಸಮಯವಾಗಿ ಪರಿಗಣಿಸಿದ್ದು, ಅದನ್ನು ಪಾಲಿಸುವುದು ಉದ್ಯೋಗದಾತರ ಕರ್ತವ್ಯ ಎಂದು ಹ್ಯೂಮನ್ ರೈಟ್ಸ್ ಸೊಸೈಟಿ ಚೇರ್ಮನ್ ಹುಮೈದಿ ಹೇಳಿದ್ದಾರೆ. ಅಂತರ್‌ರಾಷ್ಟ್ರೀಯ ಕಾನೂನುಗಳ ಅನುಸಾರವಾದ ಕೆಲಸಗಳ ಅವಕಾಶ ಮತ್ತು ಸುರಕ್ಷೆ ನೀಡುವುದು ಎನ್ನುವ ಬಾಧ್ಯತೆಯಿಂದ ತಪ್ಪಿಸುವುದು ಉದ್ಯೋಗದಾತರಿಗೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಪೂರ್ವಾಹ್ನ 11ರಿಂದ ಸಂಜೆ ಐದರವರೆಗೆ ಸೂರ್ಯ ಕಿರಣಗಳು ತಗುಲುವ ರೀತಿಯಲ್ಲಿ ತೆರೆದ ಪ್ರದೇಶದಲ್ಲಿ ಕೆಲಸಮಾಡುವುದನ್ನು ಮ್ಯಾನ್ ಪವರ್ ಅಥಾರಿಟಿಯು ನಿಷೇಧಿಸಿದೆ. ಜೂ.1ರೀಂದ ಆಗಸ್ಟ್ 31ರವರಗೆ ಈ ನಿಷೇಧ ಜಾರಿಯಲ್ಲಿದೆ. ಕಾನೂನು ಪಾಲನೆಯನ್ನು ಪಾಲಿಸುವ ಬಗ್ಗೆ ಖಾತರಿಪಡಿಸಲಾಗುತ್ತಿದ್ದು, ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com