janadhvani

Kannada Online News Paper

ಈದ್: ದುಬೈ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಗಮನಕ್ಕೆ

ದುಬೈ: ಈದ್ ರಜೆಯ ಪ್ರಯುಕ್ತ ಈ ವಾರಾಂತ್ಯದಲ್ಲಿ ವಿಮಾನ ನಿಲ್ದಾಣದಲ್ಲಿ ಜನಸಂದಣಿ ಉಂಟಾಗಲಿದೆ ಎಂದು ಎಮಿರೇಟ್ಸ್ ತಿಳಿಸಿದೆ. ಶುಕ್ರವಾರ 80,000 ಮಂದಿ ಮೂರನೇ ಟರ್ಮಿನಲ್ ಮೂಲಕ ಯಾತ್ರೆ ಹೊರಟಿದ್ದಾರೆ. ಜನಸಂದಣಿ ಉಂಟಾಗಲಿರುವುದನ್ನು ಮನಗಂಡು ಯಾತ್ರಿಕರು ಸಮಯಕ್ಕಿಂತ ಮುಂಚಿತವಾಗಿ ಆಗಮಿಸುವಂತೆ ಎಮಿರೇಟ್ಸ್ ಮತ್ತು ಏರ್ ಇಂಡಿಯಾ ವ್ಯಕ್ತಪಡಿಸಿದೆ.

ಜೂನ್ 3 ಸೋಮವಾರದ ವರೆಗೆ ಜನಸಂದಣಿ ಮುಂದುವರಿಯಲಿದ್ದು, ಈ ದಿನಗಳಲ್ಲಿ ದುಬೈ ವಿಮಾನ ನಿಲ್ದಾಣದ ಮೂಲಕ 3,09,000 ಪ್ರಯಾಣಿಕರು ಯಾತ್ರೆ ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಲವು ರಸ್ತೆಗಳ ಕಾಮಗಾರಿ ಕೂಡ ನಡೆಯುತ್ತಿದೆ. ಆದ್ದರಿಂದ ಮೂರು ಗಂಟೆ ಮುಂಚಿತವಾಗಿ ಯಾತ್ರಿಕರು ವಿಮಾನ ನಿಲ್ದಾಣಕ್ಕೆ ತಲುಪಬೇಕಿದೆ.

ಆರು ಗಂಟೆ ಮುಂಚಿತವಾಗಿ ಯಾತ್ರಿಕರಿಗೆ ತಮ್ಮ ಲಗ್ಗೇಜ್‌ಗಳನ್ನು ಚೆಕ್ ಇನ್ ಮಾಡಬಹುದಾಗಿದೆ. ಕುಟುಂಬಗಳಿಗಾಗಿ ಮೂರನೇ ಟರ್ಮಿನಲ್ ನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ವಿಮಾನ ಹೊತಡುವುದಕ್ಕಿಂತ ಒಂದು ತಾಸು ಮುಂಚಿತವಾಗಿಯಾದರೂ ರಿಪೋರ್ಟ್ ಮಾಡದವರನ್ನು ಯಾತ್ರೆ ಹೊರಡುವುದಕ್ಕೆ ಸಮ್ಮತಿಸಲಾಗದು ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸಮಯವನ್ನು ಲಾಭಿಸುವುದಕ್ಕಾಗಿ ಯಾತ್ರಿಕರು ಆನ್ ಲೈನ್ ಮೂಲಕವೂ ಚೆಕ್ ಇನ್ ಮಾಡಬಹುದಾಗಿದೆ. ಹೊರಡುವುದಕ್ಕೆ ನಲವತ್ತೈದು ನಿಮಿಷಗಳ ಮುಂಚಿತವಾಗಿ ಬೋರ್ಡಿಂಗ್ ಪ್ರಾರಂಭಗೊಳ್ಳಲಿದ್ದು, ಇಪ್ಪತ್ತು ನಿಮಿಷಗಳ ಮುಂಚೆ ಗೇಟ್‌ಗಳನ್ನು ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com