janadhvani

Kannada Online News Paper

ಹಜ್ ಉಮ್ರಾ ಸೇವೆಗಳಿಗಾಗಿ ಸೌದಿ ಆಡಳಿತದ ಸ್ವಂತ ಕಂಪನಿ ಸ್ಥಾಪನೆ

ಮಕ್ಕಾ: ಹಜ್ ಉಮ್ರಾ ಸೇವೆಗಳಿಗಾಗಿ ಸೌದಿ ಆಡಳಿತವು ಸ್ವಂತ ಕಂಪೆನಿಯನ್ನು ಸ್ಥಾಪಿಸಲಿದೆ. ಮುಂದಿನ ಹಜ್ ಸೀಝನ್ ಬಳಿಕ ಇದರ ಕ್ರಿಯೆಗಳು ಪ್ರಾರಂಭವಾಗಲಿದ್ದು, ಹಜ್ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವುದು ಇದರ ಮೂಲ ಉದ್ದೇಶವಾಗಿದೆ.

ಹಜ್-ಉಮ್ರಾ ಸೇವೆಗಳನ್ನು ದೇಶದ ವಿವಿಧ ಏಜೆನ್ಸಿಗಳು ನಿರ್ವಹಿಸುತ್ತಿದ್ದು, ಹಜ್ ಕಾಲದಲ್ಲಿ ಮಕ್ಕಾ, ಅರಫ, ಮಿನಾ ಮುಂತಾದೆಡೆಗಳಲ್ಲಿನ ಸೇವೆಗಳನ್ನು ಇವರೇ ಪೂರ್ತಿಗೊಳಿಸುತ್ತಿದ್ದಾರೆ. ಹಜ್-ಉಮ್ರಾ ಸಚಿವಾಲಯದೊಂದಿಗಿನ ಕರಾರಿನ ಆಧಾರದಲ್ಲಿ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿದ್ದು, ಯಾತ್ರಾರ್ಥಿಗಳ ಯಾತ್ರಾ ಸೌಕರ್ಯಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಕೆಲಸಗಳನ್ನು ಇನ್ನು ಮುಂದೆ ಸೌದಿ ಆಡಳಿತವು ನೇರವಾಗಿ ನಿರ್ವಹಿಸಲಿದೆ. ಇದಕ್ಕಾಗಿ ಹೊಸ ಕಂಪೆನಿಯನ್ನು ಮುಂದಿನ ಹಜ್ ಸೀಝನ್ ಬಳಿಕ ಪ್ರಾರಂಭಿಸುವುದಾಗಿ ಹಜ್-ಉಮ್ರಾ ಖಾತೆಯ ಸಹ ಸಚಿವ ತಿಳಿಸಿದ್ದಾರೆ. ಈ ಮೂಲಕ ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸಬಹುದು ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com