ಸ್ಪೋಟಗೊಂಡ ಐ ಫೋನ್ ಬ್ಯಾಟರಿ-ವೀಡಿಯೋ ವೈರಲ್

ಚೀನಾ: ಬ್ಯಾಟರಿಯು ಒರಿಜಿನಲಾಗಿರಬಹುದೇ ಎನ್ನುವ ಗುಮಾನಿಯಿಂದ ಹಲವು ರೀತಿಯಲ್ಲಿ ಅವುಗಳನ್ನು ಪರೀಕ್ಷೆಗೊಳಪಡಿಸುವವರು ನಮ್ಮಲ್ಲಿದ್ದಾರೆ. ಖರೀದಿಸುವ ಮಾಲು ಅಸಲೋ – ನಕಲಿಯೊ ಎನ್ನುವುದನ್ನು ತಿಳಿಯುವುದು ಖರೀದಿದಾರರ ಹಕ್ಕು, ಆದರೆ ಇದು ಸ್ವಲ್ಪ ಅತಿಯಾಯ್ತು ಎನ್ನದೆ ತರವಿಲ್ಲ. ಈ ಪ್ರಕರಣ ಚೀನಾ ದಲ್ಲಿ ನಡೆದಿದೆ. ಬ್ಯಾಟರಿ ಒರಿಜಿನಲ್ ಆಗಿದೆಯೇ ಎಂಬುದನ್ನು ತಿಳಿಯಲು ಆತ ಬ್ಯಾಟರಿಯನ್ನು ಬಾಯಿಂದ ಕಚ್ಚಿ ನೋಡಿದ್ದೇ ತಡ ಕೈಯಲ್ಲಿದ್ದ ಮೊಬೈಲ್ ಸ್ಪೋಟಗೊಂಡಿತು. ವೀಡಿಯೋ ನೋಡಿ 

ಈ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಇಲೆಕ್ಟ್ರಾನಿಕ್ ಅಂಗಡಿಗೆ ಒಬ್ಬಳು ಯುವತಿಯೊಂದಿಗೆ ಆತ ಆಗಮಿಸಿದ್ದ. ಬ್ಯಾಟರಿಯನ್ನು ಪರೀಕ್ಷಣೆಗೆ ಒಳಪಡಿಸಿದಾದ ಈ ಅನಾಹುತ ಸಂಭವಿಸಿದೆ. ಪುಣ್ಯಕ್ಕೆ ಯಾರಿಗೂ ಅಪಾಯ ಉಂಟಾಗಿಲ್ಲ. ಮಾರುಕಟ್ಟೆಯಲ್ಲಿ ಮೊಬೈಲ್ ಮಾರಾಟ ಮಾಡುವಾಗ ಕಳಪೆ ಬ್ಯಾಟರಿ ನೀಡುವುದು ವಾಡಿಕೆಯಾಗಿದೆ. ಆ ಕಾರಣಕ್ಕಾಗಿ ಬ್ಯಾಟರಿಯ ಒರಿಜಿನಾಲಿಟಿಯನ್ನು ಪರೀಕ್ಷಿಸಿದ ನಂತರವೇ ಗ್ರಾಹಕರು ಮೊಬೈಲ್ ಖರೀದಿಸುವುದನ್ನು ವಾಡಿಕೆ ಮಾಡಿ ಬಿಟ್ಟಿದ್ದಾರೆ. ಆದೇ ವೇಳೆ ಆ್ಯಪಲ್ ಐಫೋನ್ಗಳ ಬ್ಯಾಟರಿ ಸ್ಪೋಟಗೊಳ್ಳುವುದು ಸಾಮಾನ್ಯವಾಗಿದೆ ಎನ್ನುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಇತ್ತೀಚೆಗೆ ಸೂರಿಚ್ಚಿಯಲ್ಲಿ ಆ್ಯಪಲ್ ಸ್ಟೋರಿನಲ್ಲಿ ಬ್ಯಾಟರಿ ಸ್ಪೋಟಗೊಂಡು ಒಬ್ಬರಿಗೆ ಗಾಯವಾಗಿತ್ತು.

Leave a Reply

Your email address will not be published. Required fields are marked *

error: Content is protected !!