janadhvani

Kannada Online News Paper

ಶುಭ ಸುದ್ಧಿ: ಯುಎಇಯ ಚಾಲಣಾ ಪರವಾನಗಿ ಪರಿಶೀಲನೆಗೆ ಭಾರತದಲ್ಲೇ ಅವಕಾಶ

ಅಬುಧಾಬಿ: ಯುಎಇಯ ಅನಿವಾಸಿ ಭಾರತೀಯರಿಗೆ ಚಾಲಣಾ ಪರವಾನಗಿ ಪಡೆಯುವ ಪರಿಶೀಲನೆಯನ್ನು ಇನ್ನು ಮುಂದೆ ತಮ್ಮ ಊರಲ್ಲೇ ಪಡೆಯಬಹುದಾಗಿದೆ.

ಭಾರತದಲ್ಲಿನ ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮತ್ತು ಎಮಿರೇಟ್ಸ್ ಡ್ರೈವಿಂಗ್ ಇನ್ಸ್ಟಿಟ್ಯೂಟ್ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶದ ವಿವಿಧ ಡ್ರೈವಿಂಗ್ ಸ್ಕೂಲ್‌ಗಳು ಇನ್ನು ಮುಂದೆ ಯುಎಇ ಲೈಸೆನ್ಸ್ ಪಡೆಯುವ ತರಗತಿಗಳನ್ನು ನಡೆಸಲಿದೆ. ಯುಎಇ ತಲುಪಿದ ನಂತರ ಟೆಸ್ಟ್‌ನಲ್ಲಿ ಭಾಗವಹಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಇ ಚಾಲಣಾ ಟೆಸ್ಟ್‌ ಗೆ ಮುಂಚಿತವಾಗಿ ಪಡೆಯಬೇಕಾದ ಪರಿಶೀಲನೆಯನ್ನು ಭಾರತದಲ್ಲೇ ಪಡೆಯುವ ರೀತಿಯಲ್ಲಿ ಈ ಯೋಜನೆ ರೂಪೀಕರಿಸಲಾಗಿದೆ ಎಂದು ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ನ ಎಂ.ಡಿ. ಮನೀಶ್ ಕುಮಾರ್ ತಿಳಿಸಿದ್ದಾರೆ. ಪರಿಶೀಲನೆ ಪಡೆದ ನಂತರ ಸರ್ಟಿಫಿಕೇಟ್ ನೀಡಲಾಗುವುದು. ಯುಎಇ ತಲುಪಿದ ಬಳಿಕ ಎಮಿರೇಟ್ಸ್ ಡ್ರೈವಿಂಗ್ ಸ್ಕೂಲ್ ಕ್ಯಾಂಪಸ್ ಗಳಲ್ಲಿ ನಂತರದ ಟೆಸ್ಟ್‌ಗಳನ್ನು ಪೂರ್ತಿಗೊಳಿಸಬಹುದಾಗಿದ್ದು, ಅದಕ್ಕೆ ಬೇಕಾಗುವ ಸಮಯ ಮತ್ತು ಖರ್ಚು ವೆಚ್ಚವನ್ನು ಈ ಮೂಲಕ ಕಡಿಮೆಗೊಳಿಸಬಹುದಾಗಿದೆ ಎಂದು ಮನೀಶ್ ಹೆಳಿದರು.

ಭಾರೀ ಮೊತ್ತ ಖರ್ಚು ತಗುಲುವ ಸಲುವಾಗಿ ಯುಎಇಯಲ್ಲಿ ಡ್ರೈವಿಂಗ್ ಪರಿಶೀಲನೆ ಪೂರ್ಣಗೊಳಿಸಿ ಲೈಸೆನ್ಸ್ ಪಡೆಯುವುದು ಹಲವಾರು ಅನಿವಾಸಿಯರಿಗೆ ಅಸಾಧ್ಯವಾಗಿತ್ತು. ಪ್ರತೀ ಟೆಸ್ಟ್‌ಗಳಿಗೆ 5000 ದಿರ್ಹಂಗಿಂತಲೂ ಮೇಲೆ ಖರ್ಚು ತಗುಲುತ್ತದೆ. ಅನಿವಾಸಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕೇರಳ, ಪಂಜಾಬ್, ಆಂದ್ರಪ್ರದೇಶ, ಒಡೀಶಾ ಮುಂತಾದೆಡೆ ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ ಡ್ರೈವಿಂಗ್ ಸ್ಕೂಲ್‌ಗಳನ್ನು ಪ್ರಾರಂಭಿಸಲಿದೆ. ಪ್ರಥಮ ಹಂತದಲ್ಲಿ ಚಲಾವಣೆಯಲ್ಲಿರುವ ಡ್ರೈವಿಂಗ್ ಸ್ಕೂಲ್ಗಳಲ್ಲಿ ಲೆಫ್ಟ್ ಹ್ಯಾಂಡ್‌ ಡ್ರೈವಿಂಗ್ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಮುಂದಿನ ಹಂತವಾಗಿ ಜಿಸಿಸಿ ರಾಜ್ಯಗಳ ಡ್ರೈವಿಂಗ್ ಪರಿಶೀಲನೆ ಪಡೆಯುವ ರೀತಿಯಲ್ಲೂ ಯೋಜನೆಯನ್ನು ರೂಪಿಸಲಾಗುವುದು ಎಂದು ನ್ಯಾಷನಲ್ ಸ್ಕಿನ್ ಡೆವಲಪ್ಮೆಂಟ್ ಕಾರ್ಪೊರೇಷನ್‌ ತಿಳಿಸಿದೆ.

error: Content is protected !! Not allowed copy content from janadhvani.com