janadhvani

Kannada Online News Paper

ಪವಿತ್ರ ರಮಝಾನ್ ಮತ್ತು ಮಸ್ಜಿದುಲ್ ಹರಾಮ್‌ನ ಗೌರವ ಕಾಪಾಡಿ- ಶೈಖ್ ಸುದೈಸ್

ಮಕ್ಕಾ: ಪವಿತ್ರ ರಮಝಾನ್ ಮತ್ತು ಮಸ್ಜಿದುಲ್ ಹರಾಮ್‌ಗೆ ಗೌರವ ತೋರಲು ವಿಶ್ವಾಸಿಗಳಿಗೆ ಸಾಧ್ಯವಾಗ ಬೇಕೆಂದು ದ್ವಿಹರಮ್‌ಗಳ ಕಾರ್ಯಾಲಯ ಅಧಿಕಾರಿ ಶೈಖ್ ಡಾ.ಅಬ್ದುರ್ರಹ್ಮಾನ್ ಅಲ್ ಸುದೈಸ್ ಹೇಳಿದ್ದಾರೆ.

ಅತ್ಯಂತ ಪ್ರತಿಫಲ ಲಭಿಸುವ ಪುನೀತ ರಾತ್ರಿಗಳಲ್ಲಿ ಐಹಿಕ ಕೃತ್ಯಗಳಲ್ಲಿ ಮುಳುಗದಿರುವಂತೆ ಎಚ್ಚರ ವಹಿಸಬೇಕು.ಮಹಿಳೆಯರಿಗೆ ನಮಾಜ್ ನಿರ್ವಹಿಸಲು ಉತ್ತಮ ಅವರ ಮನೆಯಾಗಿದೆ.ಅದೇ ವೇಳೆ ತ್ವವಾಫ್ ಗಾಗಿ ಮತ್ತು ರೌಳಾ ಝಿಯಾರತ್ ಗಾಗಿ ಆಗಮಿಸುವ ಮಹಿಳೆಯರು ಇಸ್ಲಾಮ್ ಪ್ರತಿಪಾದಿಸಿದ ರೀತಿಯಲ್ಲಿರುವ ವಸ್ತ್ರಗಳನ್ನು ಧರಿಸಿ ಮಸೀದಿಗೆ ಬರುವಂತೆ ಇಶಾ ನಮಾಝಿನ ಬಳಿಕ ನಡೆದ ಪ್ರವಚನದಲ್ಲಿ ಅವರು ಹೇಳಿದರು.

ರಮಝಾನ್ ‌ನಲ್ಲಿ ತ್ವವಾಫ್ ಮಾಡುವವರಿಗಾಗಿ ಮತಾಫನ್ನು ಸೀಮಿತ ಗೊಳಿಸಲಾಗಿದ್ದು, ವಿಶ್ವಾ ಸಿಗಳಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಹರಮ್ ಒಳಗಿನ ನಡೆದಾರಿಯಲ್ಲಿ ದಟ್ಟಣೆ ಉಂಟು ಮಾಡಬಾರದು. ಯಾತ್ರಾರ್ಥಿಗಳ ಸಹಕಾರಕ್ಕಾಗಿ ಸುರಕ್ಷಾ ವಿಭಾಗಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಅವರ ನಿರ್ದೇಶನಗಳನ್ನು ಕಡೆಗಣಿಸದಿರುವಂತೆ ಶೈಖ್ ಅಲ್ ಸುದೈಸ್ ಹೇಳಿದ್ದಾರೆ.

error: Content is protected !! Not allowed copy content from janadhvani.com