janadhvani

Kannada Online News Paper

ರಂಝಾನ್ ಮತ್ತು ವಿಪರೀತ ಬಿಸಿಲು: ಮತದಾನ ಸಮಯ ಬದಲಾವಣೆ ಆಯೋಗಕ್ಕೆ ಬಿಟ್ಟದ್ದು- ಸುಪ್ರೀಂ

ನವದೆಹಲಿ: ಮೇ 5ರಿಂದ ರಂಜಾನ್​ ಪ್ರಾರಂಭವಾಗುತ್ತಿದೆ ಹಾಗೂ ಬಹುತೇಕ ರಾಜ್ಯಗಳಲ್ಲಿ ಬಿಸಿಲು ಮಿತಿ ಮೀರುತ್ತಿರುವ ಕಾರಣ ಲೋಕಸಭಾ ಚುನಾವಣೆಯ ಮುಂಬರುವ ಹಂತಗಳಲ್ಲಿ ಮತದಾನ ಕಡಿಮೆಯಾಗಬಹುದು. ಹಾಗಾಗಿ ಮತದಾನದ ಸಮಯ ಬದಲಾವಣೆ ಮಾಡಲು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾದ ಮನವಿ ಬಗ್ಗೆ ಸೂಕ್ತ ನಿರ್ಧಾರ ನೀವೇ ಕೈಗೊಳ್ಳಬಹುದೇ ಎಂದು ಕೋರ್ಟ್​ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಮೇ 6, 12, 19ರಂದು ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಮೇ 5ರಿಂದ ಮುಸ್ಲಿಮರಿಗೆ ರಂಜಾನ್​ ತಿಂಗಳು ಪ್ರಾರಂಭವಾಗಲಿದೆ. ಈ ದಿನಗಳಲ್ಲಿ ಮುಸ್ಲಿಮರು ದಿನವಿಡೀ ಸಾಲಿನಲ್ಲಿ ನಿಂತು ಮತದಾನ ಮಾಡಲು ಸಾಧ್ಯವಿಲ್ಲ. ಅದಲ್ಲದೆ, ರಾಜಸ್ಥಾನ ಸೇರಿ ಹಲವು ಪ್ರದೇಶಗಳಲ್ಲಿ ಬಿಸಿಲು ಕೂಡ ವಿಪರೀತ ಹೆಚ್ಚಾಗುತ್ತಿದ್ದು ಇದೇ ಕಾರಣಕ್ಕೆ ಜನರು ಹೊರಬರುವುದಿಲ್ಲ. ಹಾಗಾಗಿ ಮತದಾನವನ್ನು ಬೆಳಗ್ಗೆ 7 ಗಂಟೆ ಬದಲಾಗಿ ಮುಂಜಾನೆ 5ಕ್ಕೆ ಪ್ರಾರಂಭಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಚುನಾವಣೆ ಪ್ರಾರಂಭವಾದ ಮೇಲೆ ಚುನಾವಣಾ ಆಯೋಗದ ಕೆಲಸಗಳಲ್ಲಿ ಸುಪ್ರೀಂಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲದ ಕಾರಣ ಬಿಸಿಲು ಮತ್ತು ರಂಜಾನ್​ ಕಾರಣಕ್ಕೆ ಮತದಾನದ ಸಮಯವನ್ನು ಮರು ಪರಿಷ್ಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಬಿಟ್ಟಿದೆ.ಈಗ ನಡೆದ ಐದು ಹಂತದ ಮತದಾನ ಬೆಳಗ್ಗೆ 7ರಿಂದ ಪ್ರಾರಂಭವಾಗಿತ್ತು.

error: Content is protected !! Not allowed copy content from janadhvani.com